ಶಿರಸಿ: ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು (ರಿ) ಬೆಂಗಳೂರು ಜಿಲ್ಲಾ ಘಟಕ ಉತ್ತರ ಕನ್ನಡ ಮತ್ತು ತಾಲೂಕ ಘಟಕ ಶಿರಸಿ ಇವರ ಆಶ್ರಯದಲ್ಲಿ ಮೇ. 14 ಮಧ್ಯಾಹ್ನ 3 ಗಂಟೆಗೆ ಶಿರಸಿಯ ನೆಮ್ಮದಿ ಕುಟೀರದಲ್ಲಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ “ಸಾಧಕರಿಗೆ ಸನ್ಮಾನ” “ಕವಿ ಕಮ್ಮಠ “” ಕಾರ್ಯಕ್ರಮ ನಡೆಸುವ ಕಾರ್ಯಕ್ರಮದ ರೂಪುರೇಷೆ ನಿರ್ಧರಿಸುವ ಪೂರ್ವಭಾವಿ ಸಭೆ ನಡೆಯಿತು.
ಶ್ರೀ ಸಿದ್ಧೇಶ್ವರ ಸ್ವಾಮಿಗಳ ಶುಭಾಶೀರ್ವಾದದೊಂದಿಗೆ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮನೋಹರ ನಾಯಕ ಅಧ್ಯಕ್ಷತೆಯಲ್ಲಿ ಶಿರಸಿ ಘಟಕದ ಅಧ್ಯಕ್ಷರಾದ ರಾಜು ನಾಯ್ಕರ ಸ್ವಾಗತದೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯನ್ನು ಒಳಗೊಂಡ ಶಿಕ್ಷಣ, ಕಲೆ, ಸಂಗೀತ, ಸಾಹಿತ್ಯ, ನಾಟಕ ನೃತ್ಯ, ಸಮಾಜ ಸೇವೆ ಉದ್ಯಮರಂಗ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಲೆ ಮರೆಯ ವ್ಯಕ್ತಿತ್ವವನ್ನು ಗೌರವಿಸಿ ಸನ್ಮಾನಿಸುವುದು ಹಾಗೂ ಇದೇ ಪ್ರಥಮ ಬಾರಿಗೆ ಸಾಹಿತ್ಯದ ಕವನ ಗೋಷ್ಠಿಗೆ ಹೊಸ ಆಯಾಮ ನೀಡುವ ಕವಿ ಕಮ್ಮಠ ಕಾರ್ಯಕ್ರಮ ನಿರೂಪಿಸುವುದರ ಕುರಿತು ಸುದೀರ್ಘ ಚರ್ಚೆ ಸಂವಾದ ನಡೆಸಲಾಯಿತು. ಸುರೇಶ್ ಭಟ್, ಮನೋಜ್ ಪಾಲೇಕರ, ಪ್ರಕಾಶ್ ರಾಥೋಡ್, ಸಂಗೀತ ವಿದೂಷಿ ಶ್ರೀಮತಿ ರೇಖಾ ಭಟ್, ಶ್ರೀಮತಿ ಶೋಭಾ ರಾಯ್ಕರ್ ಸಾಹಿತಿ ಮತ್ತು ಅಖಿಲ ಕರ್ನಾಟಕ ಪರಿಷತ್ತಿನ ಮಹಿಳಾ ಪ್ರತಿನಿಧಿ ಶ್ರೀಮತಿ ವಿಮಲಾ ಭಾಗ್ವತ್ ಯಕ್ಷಗಾನ ತಾಳಮದ್ದಲೆ ಅರ್ಥಧಾರಿ ಮತ್ತು ಕಾರ್ಯಕ್ರಮ ನಿರೂಪಕಿ ಶ್ರೀಮತಿ ರೇಣುಕಾ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು