ದಾಂಡೇಲಿ : ಸ್ಥಳೀಯ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಡಿ ನಗರದಲ್ಲಿ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಮತ್ತು ರಾಜ್ಯ ವಕ್ತಾರರು ಹಾಗೂ ದಾಂಡೇಲಿ ನಗರಸಭೆಯ ಮಾಜಿ ಸದಸ್ಯರಾದ ರೋಶನ್ ಬಾವಾಜಿ ಭಾನುವಾರ ಬೆಂಗಳೂರಿನಲ್ಲಿ ಲಿಖಿತ ಮನವಿಯನ್ನು ನೀಡಿ ವಿನಂತಿಸಿದರು.
ಎಚ್ಡಿಕೆ ಅವರಿಗೆ ನೀಡಿದ ಮನವಿಯಲ್ಲಿ ದಾಂಡೇಲಿ ನಗರದಲ್ಲಿ ಡಿಎಫ್ಎ ಮತ್ತು ಐಪಿಎಂ ಕಾರ್ಖಾನೆ ಸ್ಥಗಿತಗೊಂಡ ನಂತರದಲ್ಲಿ ಆದ ಸಮಸ್ಯೆಗಳನ್ನು ವಿವರಿಸಿದ್ದು, ಈ ನಿಟ್ಟಿನಲ್ಲಿ ನಗರದಲ್ಲಿ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ವಿನಂತಿಸಲಾಗಿದೆ. ರೋಶನ್ ಬಾವಾಜಿ ಅವರು ನೀಡಿದ ಮನವಿಗೆ ಕುಮಾರಸ್ವಾಮಿಯವರು ಸಕರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.