Slide
Slide
Slide
previous arrow
next arrow

ಕಾಂಗ್ರೆಸ್ ಸರ್ಕಾರದ‌ ಗ್ಯಾರಂಟಿ ಯೋಜನೆಯಿಂದ ಯಾರೂ ವಂಚಿತರಾಗದಿರಿ:‌ಮಂಕಾಳ ವೈದ್ಯ

300x250 AD

ಹೊನ್ನಾವರ : ದೇಶದ ಇತಿಹಾಸದಲ್ಲಿ ಬೇರೆ ಯಾವ ರಾಜ್ಯದಲ್ಲೂ ಇರದ ಕಾರ್ಯಕ್ರಮವನ್ನು ನಮ್ಮ ಸರಕಾರ ಕೊಟ್ಟಿದೆ. ಚುನಾವಣೆ ಪೂರ್ವ ನುಡಿದಂತೆ 5 ಗ್ಯಾರಂಟಿ ಯೋಜನೆಯನ್ನು 5 ತಿಂಗಳಿನಲ್ಲಿ ಅನುಷ್ಠಾನ ಮಾಡಿದ್ದೇವೆ. ಯಾರು ಈ ಯೋಜನೆಯಿಂದ ವಂಚಿತರಾಗಬಾರದು ಎಂದು ಸರಕಾರ ಗ್ಯಾರಂಟಿ ಪ್ರಾಧಿಕಾರ ರಚನೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ಎಸ್. ವೈದ್ಯ ಹೇಳಿದರು.

ಅವರು ತಾಲೂಕಾ ಪಂಚಾಯತ ಸಬಾಭವನದಲ್ಲಿ ತಾಲೂಕಾ ಗ್ಯಾರಂಟಿ ಯೋಜನೆಯಗಳ ಅನುಷ್ಠಾನ ಸಮಿತಿಯ ಕಚೇರಿ ಉದ್ಘಾಟಿಸಿ ಮಾತನಾಡಿದರು. ಸರಕಾರ ನುಡಿದಂತೆ ನಡೆದಿದೆ. ಸುಳ್ಳು ಹೇಳಲು, ರಾಜಕೀಯ ಮಾಡಲು ಈ ಯೋಜನೆ ತಂದಿಲ್ಲ. ಬಡವರ ಜೀವನ ನಿರ್ವಹಣೆಗೆ ಅನುಕೂಲ ಆಗಲಿ ಎಂದು ತಂದಿದ್ದೇವೆ. ಉಳ್ಳವರು ಇದರ ಪ್ರಯೋಜನ ಪಡೆದು ಕೊಳ್ಳಬಾರದು, ತೆಗೆದುಕೊಂಡರೆ ಬಂದ್ ಮಾಡಬೇಕಾಗುತ್ತದೆ. ಇದು ಬಡವರಿಗೆ ಕೊಡುವ ಯೋಜನೆ ಎಂದರು.

ಈ ಯೋಜನೆಯನ್ನು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಒಪ್ಪಿಕೊಂಡಿದ್ದಾರೆ. ಅಧಿಕಾರಿಗಳು ಶೇ. 90 ಮುಟ್ಟಿಸಿದ್ದಾರೆ. ಇದು ನೂರಕ್ಕೆ ನೂರು ತಲುಪಬೇಕು ಎಂದು ರಾಜ್ಯದಲ್ಲಿ ಪ್ರಾಧಿಕಾರ ರಚನೆ ಮಾಡಿ ರಾಜ್ಯ, ಜಿಲ್ಲೆ, ತಾಲೂಕು ಸಮಿತಿ ರಚನೆ ಮಾಡಲಾಗಿದೆ. ತಾಲೂಕಾ ಸಮಿತಿಯವರು ಐದು ಇಲಾಖೆ ಅಧಿಕಾರಿಗಳ ಸಲಹೆ ಪಡೆದು, ಯೋಜನೆ ಪ್ರಯೋಜನ ಪಡೆಯದವರ ಮನೆಗೆ ಹೋಗಿ ಏನೇ ಸಮಸ್ಯೆ ಇದ್ದರು ಪರಿಹರಿಸಿ ಯೋಜನೆಯಿಂದ ವಂಚಿತರಾಗದ ಹಾಗೆ ಮಾಡಬೇಕು ಎಂದರು.

ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸತೀಶ್ ನಾಯ್ಕ ಮಾತನಾಡಿ ವಿರೋಧಿಗಳು ಎಷ್ಟೇ ಅಪಪ್ರಚಾರ ಮಾಡಿದರು ಪಂಚ ಗ್ಯಾರಂಟಿ ಯೋಜನೆ ಬಂದ ಮಾಡುವುದಿಲ್ಲ ಎಂದು ಸರಕಾರ ಭರವಸೆ ನೀಡಿದೆ. ಬಡವರ ಮನೆಗೆ ಪ್ರತಿ ತಿಂಗಳು ಒಬ್ಬರಿಗೆ 5 ಸಾವಿರ ತಲುಪುತ್ತಿದೆ. ಮಧ್ಯವರ್ತಿಗಳಿಲ್ಲದೆ ನೇರವಾಗಿ ಬಡವರ ಖಾತೆಗೆ ಜಮಾ ಆಗುತ್ತಿದೆ. ಯೋಜನೆ ತಲುಪದೇ ಇದ್ದವರ ಮನೆಗೆ ಹೋಗಿ ಕರೆತಂದು ಕೆಲಸ ಮಾಡಿಕೊಡುವ ಜವಾಬ್ದಾರಿಯನ್ನು ಪ್ರಾಧಿಕಾರ ಮಾಡುತ್ತದೆ ಎಂದರು.

ತಾಲೂಕಾ ಸಮಿತಿ ಅಧ್ಯಕ್ಷ ಅಣ್ಣಪ್ಪ ನಾಯ್ಕ ಮಾತನಾಡಿ ಸರಕಾರ ಐದು ಗ್ಯಾರಂಟಿ ಯೋಜನೆಯ ಮೂಲಕ ಆರ್ಥಿಕ ಬಲ ನೀಡಿದೆ. ಯಾರಿಗೆ ಯೋಜನೆ ತಲುಪಿಲ್ಲ ಅಂತವರ ಮನೆಗೆ ಹೋಗಿ ಯೋಜನೆಯ ಸೌಲಭ್ಯ ದೊರಕಿಸಿ ಕೊಡುವುದು ತಾಲೂಕಾ ಸಮಿತಿಯ ಜವಾಬ್ದಾರಿ. ಪಕ್ಷದ ಪರವಾಗಿ, ಯೋಜನೆ ಪರವಾಗಿ, ನಾಯಕರ ಪರವಾಗಿ ನಾವೆಲ್ಲ ತಂಡೋಪ ತಂಡವಾಗಿ ಕೆಲಸ ಮಾಡಬೇಕಿದೆ. ಈ ಯೋಜನೆ ಕಾರ್ಯರೂಪಕ್ಕೆ ತರಲು ಪ್ರತಿಯೊಬ್ಬರು ಸಹಕಾರ ನೀಡಿ ಎಂದರು.

300x250 AD

ಮಂಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದು ಸರಕಾರ ನುಡಿದಂತೆ ನಡೆದಿದೆ. ಇದರ ಅನುಕೂಲ ಬಡವರಿಗೆ ಹಿಂದುಳಿದವರಿಗೆ ಆಗಬೇಕು, ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಲು ಗ್ಯಾರಂಟಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಯೋಜನೆ ಪಡೆಯದೇ ಇದ್ದವರು ಪ್ರಯೋಜನ ಪಡೆಯಬೇಕು ಎಂದರು. ವೇದಿಕೆಯಲ್ಲಿ ಹೊನ್ನಾವರ ಬ್ಲಾಕ್ ಅಧ್ಯಕ್ಷ ಮಹೇಶ ನಾಯ್ಕ, ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ, ಗ್ಯಾರಂಟಿ ಪ್ರಾಧಿಕಾರದ ತಾಲೂಕಾ ಕಾರ್ಯದರ್ಶಿ ಜಿ. ಎಸ್. ನಾಯ್ಕ ಇದ್ದರು.

ಸಂಜೀವಿನಿ ಯೋಜನೆ ಅಡಿಯಲ್ಲಿ ಮೊಬೈಲ್ ಕ್ಯಾಂಟೀನ್ ಉದ್ಘಾಟನೆ :

ಇದೆ ಸಂದರ್ಭದಲ್ಲಿ ಸಂಜೀವಿನಿ ಯೋಜನೆ ಅಡಿಯಲ್ಲಿ ಎರಡು ಮೊಬೈಲ್ ಕ್ಯಾಂಟೀನ್ ವಾಹನದ ಉದ್ಘಾಟನೆಯನ್ನು ಸಚಿವರು ನೆರವೇರಿಸಿದರು. ನೆರೆ ಬಂದ ಸಮಯದಲ್ಲಿ ಚಿಕ್ಕನಕೋಡ ಗ್ರಾ. ಪಂ. ವ್ಯಾಪ್ತಿಗೆ ಹೋದಾಗ ಭರವಸೆ ಕೊಟ್ಟಂತೆ ಕೇವಲ ಒಂದೇ ತಿಂಗಳಿನಲ್ಲಿ ದೋಣಿಯನ್ನು ಚಿಕ್ಕನಕೋಡ ಗ್ರಾ. ಪಂ. ಕ್ಕೆ ಹಸ್ತಾಂತರಿಸಿದರು. ಯುವಜನ ಸೇವಾಧಿಕಾರಿ ಸುದೀಸ್ ನಾಯ್ಕ ಕಾರ್ಯಕ್ರಮ ನಿರೂಪಣೆ ಮಾಡಿದರು. ತಾಲೂಕಾ ಗ್ಯಾರಂಟಿ ಸಮಿತಿಯ ಪದಾಧಿಕಾರಿಗಳು, ಜನಪ್ರತಿನಿದಿನಗಳು, ಮುಖಂಡರು, ಅಧಿಕಾರಿಗಳು ಇದ್ದರು. 

Share This
300x250 AD
300x250 AD
300x250 AD
Back to top