Slide
Slide
Slide
previous arrow
next arrow

ಸೆ.2ಕ್ಕೆ ಶಿರಸಿಯಲ್ಲಿ ಉದ್ಯೋಗ ಮೇಳ

300x250 AD

ಶಿರಸಿ: ಇಲ್ಲಿನ ಎಂಇಎಸ್ ವಾಣಿಜ್ಯ ಕಾಲೇಜಿನಲ್ಲಿ ಗ್ರೀನ್ ಕೇರ್ ಸಂಸ್ಥೆ, ಎಂಇಎಸ್ ವಾಣಿಜ್ಯ ಕಾಲೇಜು, ಅಸ್ಮಿತೆ ಫೌಂಡೇಶನ್, ಸಂಕಲ್ಪ ಇಂಟಿಗ್ರೇಟೆಡ್ ಡೆವಲಪ್ಮೆಂಟ್ ಟ್ರಸ್ಟ್ ಸಹಯೋಗದಲ್ಲಿ ಸೆ.2ರಂದು ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಬೆಂಗಳೂರಿನ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ಕ್ಯುಸೆಸ್ ಕಾರ್ಪೊರೇಟ್ ಕಂಪನಿ ಸಂದರ್ಶನವನ್ನು ನಡೆಸಲಿದೆ. ಬಿಕಾಂ ಪದವಿ ಪಡೆದಿರುವ ಯುವಕ ಯುವತಿಯರಿಗೆ ಅಕೌಂಟಿಂಗ್ ವಿಭಾಗದಲ್ಲಿ ವಿವಿಧ ಹುದ್ದೆಗಳಿಗೆ ಆಯ್ಕೆ ನಡೆಯಲಿದೆ.ಅಲ್ಲದೆ ಬ್ಲೂ ಕಾಲರ್ ಜಾಬ್ ವ್ಯವಸ್ಥೆಯಲ್ಲಿ ಕನಿಷ್ಠ 8ನೇ ತರಗತಿಯಿಂದ ಯಾವುದೇ ಪದವಿ ಪಡೆದವರಿಗೆ ವಿವಿಧ ಹುದ್ದೆಗಳಿಗೂ ಸಂದರ್ಶನ ನಡೆಯಲಿದೆ. ಆಸಕ್ತರು ಎಂಇಎಸ್ ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಹಾಜರಿರುವಂತೆ ಗ್ರೀನ್ ಕೇರ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top