Slide
Slide
Slide
previous arrow
next arrow

ಇಸ್ಪೀಟ್ ಅಡ್ಡೆ ಮೇಲೆ ದಾಳಿ: ಪ್ರಕರಣ ದಾಖಲು

300x250 AD

ಹೊನ್ನಾವರ : ಪಟ್ಟಣದ ಮಾಸ್ತಿಕಟ್ಟೆ ರಸ್ತೆಯಿಂದ ವೆಂಕಟರಮಣ ದೇವಸ್ಥಾನದಕ್ಕೆ ಹೋಗುವ ಕಾರ್ ಸ್ಟ್ರೀಟ್ ರಸ್ತೆಯಲ್ಲಿರುವ ಸ್ವಾಗತ ರಿಕ್ರಿಯೇಷನ್ ಸ್ಪೋರ್ಟ್ಸ್ ಅಸೋಸಿಯೇಷನ್ ಕ್ಲಬ್ ನ ಒಂದು ಕೋಣೆಯಲ್ಲಿ ಗುರುವಾರ ರಾತ್ರಿ ಪೊಲೀಸರು ದಾಳಿ ಮಾಡಿದ ಸಮಯದಲ್ಲಿ ಇಸ್ಪೀಟ್ ಅಂದರ್ ಬಾಹರ್ ಆಟದಲ್ಲಿ ತೊಡಗಿದ್ದ ಎಂಟು ಜನರ ಮೇಲೆ ನ್ಯಾಯಾಲಯದ ಆದೇಶ ಪಡೆದು ಪ್ರಕರಣ ದಾಖಲಿಸಲಾಗಿದೆ.

ಪಟ್ಟಣದ ರಥಬೀದಿಯ ಪ್ರದೀಪ್ ನಾಗಪ್ಪ ಶೆಟ್ಟಿ, ಹೊದಿಕೆ ಶಿರೂರಿನ ನಾಗಪ್ಪ ಗೋವಿಂದ ಪಟಗಾರ, ಸ್ವಾಗತ ರಿಕ್ರಿಯೇಷನ ಅಧ್ಯಕ್ಷ ಶ್ರೀಪಾದ ವಾಸುದೇವ ಜನ್ನು, ಮಂಕಿ, ಹೊಸಹಿತ್ಲ ಅಣ್ಣಪ್ಪ ಸುಕ್ರು ಹರಿಕಂತ್ರ, ಸತ್ತಗಟ್ಟಿ ಕಲಘಟಗಿ, ಧಾರವಾಡ, ಹಾಲಿ ರಾಯಲಕೇರಿ ನಿವಾಸಿ ಬಸವರಾಜ ಕಲ್ಲಪ್ಪ ಹುಬ್ಬಳ್ಳಿ, ಮಂಕಿ ಚಿತ್ತಾರದ ಭಾಸ್ಕರ ದತ್ತಾ ನಾಯ್ಕ, ಶಿರೂರು ಬೈಂದೂರಿನ ವಿನಯಕುಮಾರ ನಾಗೇಶ ಶೆಟ್ಟಿ, ಕುಮಟಾ ಹಂದಿಗೋಣ ಕೃಷ್ಣ ನಾರಾಯಣ ನಾಯ್ಕ ಸೇರಿ ಈ ಎಂಟು ಜನರ ಮೇಲೆ ಪ್ರಕರಣ ದಾಖಲಾಗಿದೆ.

300x250 AD

ಈ ಸಂದರ್ಭದಲ್ಲಿ 36560 ನಗದು, ಎಂಟು ಮೊಬೈಲ್, ಮೂರು ಬೈಕ್ ಇನ್ನಿತರ ಸಲಕರಣೆ ವಸಕ್ಕೆ ಪಡೆಯಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಯವರ ಸೂಚನೆಯಂತೆ, ಭಟ್ಕಳ್ ಡಿವಾಯ್ಎಸ್‌ಪಿ ಯವರ ಮಾರ್ಗದರ್ಶನದಲ್ಲಿ, ಸಿ ಪಿ ಐ ತಿಮ್ಮಪ್ಪ ನಾಯ್ಕ್, ಪಿ ಎಸ್ ಐ ಮಹಾಂತೇಶ್ ನಾಯ್ಕ, ಪೊಲೀಸ್ ಸಿಬ್ಬಂದಿ ಜೊತೆಗೂಡಿ ದಾಳಿ ನಡೆಸಿದ್ದರು.

Share This
300x250 AD
300x250 AD
300x250 AD
Back to top