ಹೊನ್ನಾವರ: ಗುರುವಾರ ರಾತ್ರಿ ಮೀನುಗಾರಿಕೆಗೆ ತೆರಳಿದ ಬೋಟ್ ಕಾಸರಕೋಡ ಟೊಂಕ ಹತ್ತಿರ ಶರಾವತಿ ನದಿಯ ಅಳಿವೆಯಲ್ಲಿ ಸಿಲುಕಿರುವ ಘಟನೆ ನಡೆದಿದೆ.
ಕಾಸರಕೋಡ ಟೊಂಕಾದ ಅನ್ಸರ್ ಮಾಲೀಕತ್ವದ ಅರಬಿಯನ್ ಸೀ ಬೋಟ್ ಅಳಿವೆಯಲ್ಲಿ ಸಿಲುಕಿದ್ದು, 30ಕ್ಕೂ ಹೆಚ್ಚು ಮೀನುಗಾರರು ಬೋಟ್‌ನಲ್ಲಿದ್ದರು. ಬೋಟ್ ಮೇಲಕ್ಕೆ ಎಳೆಯುವ ಪ್ರಯತ್ನ ಸಫಲಗೊಂಡಿಲ್ಲ. ದಿಕ್ಕು ತಪ್ಪಿದ ಬೋಟ್ ಬೆಳಿಗ್ಗೆ ಆಗುವುದರೊಂದಿಗೆ ಮೇಲಕ್ಕೆ ಬಂದು ಬೇರೆಡೆ ಬಂದು ನಿಂತಿದೆ. ಬೇರೆ ಯಾವುದೇ ಬೋಟ್ ಅಥವಾ ದೋಣಿ ಹತ್ತಿರ ಹೋಗಲು ಸಾಧ್ಯವಾಗದೆ ಇರುವುದರಿಂದ ಮೀನುಗಾರರು ಬೋಟ್ ನಲ್ಲಿಯೇ ಇರುವ ಪರಿಸ್ಥಿತಿ ಉಂಟಾಗಿತ್ತು. ಶುಕ್ರವಾರ ಸ್ಥಳೀಯ ಮೀನುಗಾರರ ಮಾಲಿಕತ್ವದ MTC ಬೋಟ ಮಾರಿಯಂಬ ಮತ್ತು ಕಾವೇರಿ ಬೋಟ ಹಾಗು ಇರಬಲ್ ಗಪುರ ಸಾಬ ರವರ ಸಲಾಮತಿ, ವಿಠ್ಠಲ್ ಬಾಬು ತಾಂಡೇಲ್ ಇವರ ದೋಣಿಯ ಸಹಾಯದೊಂದಿಗೆ ಬೋಟ್ ತಪ್ಪಿಸುವ ಕಾರ್ಯಚರಣೆ ಮಾಡಿದ್ದಾರೆ.