Slide
Slide
Slide
previous arrow
next arrow

ವಿಷ್ಣು ಸಹಸ್ರನಾಮದ ವಿಶಿಷ್ಟ ಶ್ಲೋಕಗಳು

300x250 AD

“ಶುಭಾಂಗೋ ಲೋಕಸಾರಂಗಃ                          ಸುತಂತುಸ್ತಂತುವರ್ಧನಃ | ಇಂದ್ರಕರ್ಮಾ ಮಹಾಕರ್ಮಾ ಕೃತಕರ್ಮಾ ಕೃತಾಗಮಃ”                 

ಭಾವಾರ್ಥ:- ಉತ್ತಮವಾದ ಅಂಗಗಳಿಂದ ಕೂಡಿದವನು. ಧ್ಯಾನ ಮಾಡತಕ್ಕವನು.ಆದ್ದರಿಂದ ‘ಶುಭಾಂಗನು’. ಲೋಕಗಳ ಸಾರವನ್ನು ಸಾರಂಗದಂತೆ ಎಂದರೆ ಭೃಮರದಂತೆ ಹೀರಿ ತೆಗೆದುಕೊಳ್ಳುತ್ತಾನೆ.ಆದ್ದರಿಂದ ‘ಲೋಕಸಾರಂಗನು.’ಪ್ರಜಾಪತಿಯು ಲೋಕಗಳನ್ನು ಕುರಿತು ಆಲೋಚಿಸಿದನು ಎಂಬ ಶ್ರುತಿಯು ಇದಕ್ಕೆ ಪ್ರಮಾಣವು. ಲೋಕದ ಸಾರವನ್ನು ಅರಿಯಲ್ಪಡ ತಕ್ಕವನು,ಆದ್ದರಿಂದ ‘ಲೋಕಸಾರಂಗನು’ ಎಂದಾದರೂ ಈ ನಾಮದ ಅರ್ಥ ‘ಸು’ಎಂದರೆ ಒಳ್ಳೆಯ,’ತಂತು’ ಎಂದರೆ ಹರಡಿರುವ ಪ್ರಪಂಚವು ಈತನದು,ಆದ್ದರಿಂದ ‘ಸುತಂತುವು’.ಆ ತಂತುವನ್ನೇ ಬೆಳೆಯಿಸುತ್ತಾನೆ ಅಥವಾ ಕತ್ತರಿಸುತ್ತಾನೆ.(ಪುಣ್ಯ ಪಾಪ ಕರ್ಮಗಳ ಸಂಸಾರ ಪ್ರಪಂಚವನ್ನು ಬೆಳೆಯಿಸುತ್ತಾನೆ.ಭಕ್ತರ ಸಂಸಾರವನ್ನು ಕತ್ತರಿಸುತ್ತಾನೆ.)ಆದ್ದರಿಂದ ‘ತಂತುವರ್ಧನನು’.                       ಇಂದ್ರನ ಕರ್ಮದಂತೆ ಇರುವ ಕರ್ಮವು ಈತನದು, ಆದ್ದರಿಂದ ‘ಇಂದ್ರಕರ್ಮನು. ಸ್ವತಂತ್ರವಾದ ಕರ್ಮವುಳ್ಳವನು ಎಂದರ್ಥ.ಆಕಾಶವೇ  ಮುಂತಾದ ಮಹಾಭೂತಗಳು ಈತನ ಕರ್ಮಗಳು, ಕಾರ್ಯಗಳು. ಆದ್ದರಿಂದ ‘ಮಹಾಕರ್ಮನು’.ಎಲ್ಲವನ್ನೂ ಮಾಡಿದ್ದೇ ಆಗಿದೆ,ಏಕೆಂದರೆ ಇವನು ‘ಕೃತಾರ್ಥನು’. ಮಾಡಬೇಕಾದದ್ದು ಏನೊಂದೂ ಉಳಿದಿಲ್ಲವಾದ್ದರಿಂದ ‘ಕೃತಕರ್ಮನು’ ಅಥವಾ ಧರ್ಮಸ್ವರೂಪವಾದ ಕರ್ಮವನ್ನು ಸೃಷ್ಟಿ ಮಾಡಿದವನು ಎಂದಾದರೂ(ಕೃತಕರ್ಮಾ) ಎನ್ನುವ ಈ ನಾಮಕ್ಕೆ ಅರ್ಥ.ವೇದರೂಪವಾದ ಆಗಮವು ಯಾವನಿಂದ ಮಾಡಲ್ಪಟ್ಟಿದೆಯೋ ಆ ಈತನು ‘ಕೃತಾಗಮನು’.

ಈ ಸ್ತೋತ್ರದ ವೈಶಿಷ್ಟ್ಯ: ಯಾವುದೇ ನಕ್ಷತ್ರದಲ್ಲಿ ಜನಿಸಿದರೂ ಸತ್ಸಂತಾನ ಪ್ರಾಪ್ತಿಯಾಗಬೇಕೆಂದು ಬಯಸುವವರು,  ಮಕ್ಕಳಾಗದೆ ಕೊರಗುತ್ತಿರುವವರು ಈ ಸ್ತೋತ್ರ ಹೇಳುವದರಿಂದ ಅವರ ಆಕಾಂಕ್ಷೆ ಈಡೇರುತ್ತವೆ. ಗರ್ಭಿಣಿಯಾಗಿದ್ದರೆ ಉತ್ತಮ ಸಂತಾನ ಪ್ರಾಪ್ತಿಯಾಗುತ್ತದೆ. ಹುಟ್ಟಿದ ಮಕ್ಕಳು ಸದೃಢರೂ,ಶುಭಾಂಗರೂ ಆಗುತ್ತಾರೆ. ಕುಟುಂಬದ ಭಾಗ್ಯೋದಯವೆನಿಸುವಂತೆ  ವಂಶೋದ್ಧಾರಕ ಸುಪುತ್ರ ಅಥವಾ ಸುಪುತ್ರಿ ಹುಟ್ಟಲಿ ಎನ್ನುವ ಆಸೆ ಇರುವವವರು ಅವಶ್ಯವಾಗಿ ಹೇಳಿಕೊಳ್ಳಬೇಕಾದ ಸ್ತೋತ್ರ. ಉತ್ತರಾಷಾಢನಕ್ಷತ್ರದ ೪ನೇ ಪಾದದವರು ಪ್ರತಿ ನಿತ್ಯ ೧೧ ಬಾರಿ ಈ ಸ್ತೋತ್ರ ವನ್ನು ಹೇಳಿಕೊಳ್ಳಬೇಕು.

300x250 AD

 (ಸಂ:-ಡಾ.ಚಂದ್ರಶೇಖರ.ಎಲ್.ಭಟ್.ಬಳ್ಳಾರಿ)

Share This
300x250 AD
300x250 AD
300x250 AD
Back to top