Slide
Slide
Slide
previous arrow
next arrow

ಡಾ.ಸೂರ್ಯನಾರಾಯಣ ಭಟ್‌ಗೆ ಪ್ರಾಚ್ಯವಿದ್ಯಾ ಭೂಷಣ ಪ್ರಶಸ್ತಿ ಪ್ರದಾನ

300x250 AD

ನವದೆಹಲಿ: ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ; ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ; ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ತಿರುಪತಿ – ಈ ಮೂರು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯಗಳು ಸಹಯೋಗದಲ್ಲಿ ಇತ್ತೀಚೆಗೆ (ಆ. 22) ದೆಹಲಿಯಲ್ಲಿ “ಉತ್ಕರ್ಷ ಮಹೋತ್ಸವ 2024” ಜರುಗಿತು. ಕೇಂದ್ರ ಜವಳಿ ಖಾತೆಯ ಸಚಿವ ಗಿರಿರಾಜ್ ಸಿಂಗ್ ಅವರು ಹಿರಿಯ ಸಂಶೋಧಕರು ಹಾಗೂ ವಿದ್ವಾಂಸ ಡಾ. ಸೂರ್ಯನಾರಾಯಣ ನಾಗೇಂದ್ರ ಭಟ್ಟ ಹಿತ್ಲಳ್ಳಿ ಅವರೂ ಸೇರಿದಂತೆ ಸಂಸ್ಕೃತ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಐವರಿಗೆ ಪ್ರಾಚ್ಯವಿದ್ಯಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು.

ಇದೇ ವರ್ಷದಿಂದ ಉತ್ಕರ್ಷ ಮಹೋತ್ಸವದಲ್ಲಿ ಸಂಸ್ಕೃತ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ವಿದ್ವಾಂಸರಿಗೆ ಪ್ರಾಚ್ಯವಿದ್ಯಾ ಭೂಷಣ ಪ್ರಶಸ್ತಿ ಮತ್ತು ಒಂದು ಲಕ್ಷ ರೂ. ನಗದು ಬಹುಮಾನ ನೀಡಲು ಹಾಗೂ ಅವರ ಮೂಲಕ ಸಂಸ್ಕೃತದ ಬೆಳವಣಿಗೆಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸಲು ಮೂರು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯಗಳು ನಿರ್ಧರಿಸಿವೆ. ಈ ಸಂದರ್ಭದಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ, ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮುರಳಿಮನೋಹರ ಪಾಠಕ್, ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಜಿ. ಎಸ್. ಆರ್. ಕೃಷ್ಣಮೂರ್ತಿ, ಭಾರತೀಯ ಭಾಷಾ ಸಮಿತಿಯ ಅಧ್ಯಕ್ಷ, ಸಂಸ್ಕೃತ ಪ್ರಮೋಷನ್ ಫೌಂಡೇಷನ್ ಕಾರ್ಯದರ್ಶಿ ಚ. ಮೂ. ಕೃಷ್ಣಶಾಸ್ತ್ರಿ ಉಪಸ್ಥಿತರಿದ್ದರು.

2020ರಲ್ಲಿ ಇವು ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯಗಳಾಗಿ ಘೋಷಿಸಲ್ಪಟ್ಟ ನೆನಪಿಗೆ ಪ್ರತಿ ವರ್ಷ “ಉತ್ಕರ್ಷ ಮಹೋತ್ಸವ”ವನ್ನು ಆಚರಿಸಲಾಗುತ್ತದೆ. ಸಂಸ್ಕೃತ ಭಾಷೆಯನ್ನು ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವುದು ಈ ಮಹೋತ್ಸವದ ಮುಖ್ಯ ಉದ್ದೇಶವಾಗಿದೆ.

300x250 AD

ಡಾ. ಸೂರ್ಯನಾರಾಯಣ ನಾಗೇಂದ್ರ ಭಟ್ಟ ಹಿತ್ಲಳ್ಳಿ
ಹಿರಿಯ ಸಂಶೋಧಕರು ಹಾಗೂ ವಿದ್ವಾಂಸರಾದ ಹಿತ್ಲಳ್ಳಿ ಸೂರ್ಯನಾರಾಯಣ ಭಟ್ಟರು ಮೀಮಾಂಸಾ – ವೇದಾಂತ – ನ್ಯಾಯ ಮುಂತಾದ ಶಾಸ್ತ್ರ ಗ್ರಂಥಗಳ ಅಧ್ಯಯನ ಮಾಡಿದವರು. ವಿದ್ವತ್, ಸಂಸ್ಕೃತ ಎಂ.ಎ., ಪಿಎಚ್.ಡಿ. ಪದವೀಧರರು. ಮೈಸೂರು, ಕೇರಳ, ಪುದುಚೇರಿ ಮಂತಾದೆಡೆಗಳಲ್ಲಿ ಸಂಸ್ಕೃತ ಪಂಡಿತ, ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ ಅವರು; ಕಲ್ಲಿಕೋಟೆ ಮತ್ತು ತಿರುಪತಿಯ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶನ ಪ್ರಾಧ್ಯಾಪಕರೂ ಹೌದು. ಕನ್ನಡ, ಸಂಸ್ಕೃತ ಭಾಷೆಗಳ ಹಲವಾರು ಪುಸ್ತಕಗಳ ಲೇಖಕರಾದ ಅವರು ಪತ್ರಿಕೆಗಳಲ್ಲಿ ಆಗೀಗ ಲೇಖನಗಳನ್ನೂ ಬರೆದಿದ್ದಾರೆ. ಪಾಣಿನಿಯನ್ನು ಕುರಿತ ಸಿ.ಡಿ.ಯನ್ನು ಭಾರತೀಯ ಭಾಷಾ ಸಂಸ್ಥಾನ ಹೊರತಂದಿದೆ.

Share This
300x250 AD
300x250 AD
300x250 AD
Back to top