ಹೊನ್ನಾವರ: ತಾಲೂಕಿನ ಅರೇಅಂಗಡಿಯ ಕ್ರೀಡಾಂಗಣದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಎಂಪಿಇ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿಯು ಕಾಲೇಜು ಗಮನಾರ್ಹ ಸಾಧನೆ ಮಾಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ವಿದ್ಯಾರ್ಥಿಗಳು ನೀಡಿದ ಅತ್ಯಮೋಘ ಪ್ರದರ್ಶನ ಕಾರಣದಿಂದ ವೈಯಕ್ತಿಕ ವೀರಾಗ್ರಣಿ ಹಾಗೂ ಸಮಗ್ರ ವೀರಾಗ್ರಣಿಯೊಂದಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಎಸ್.ಡಿ.ಎಂ. ಪದವಿಪೂರ್ವ ಕಾಲೇಜು ಆಯ್ಕೆಯಾಗಿದೆ. ಬಾಲಕರ ವೈಯಕ್ತಿಕ ವಿಭಾಗದಲ್ಲಿ ಲೊಕೇಶ್ ಗೌಡ- 400 ಮೀಟರ್ ಓಟ, 110 ಮೀ. ಹರ್ಡಲ್ಸ್ ಹಾಗೂ 400 ಮೀ. ಹರ್ಡಲ್ಸ್ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪಡೆದಿದ್ದಾನೆ. ಹೇಮಂತ್ ಎಸ್. ಗೌಡ – ಹ್ಯಾಮರ್ ಥ್ರೋ, ಚಕ್ರ ಎಸೆತ ಪ್ರಥಮ ಸ್ಥಾನ ಹಾಗೂ ಗುಂಡು ಎಸೆತ ದ್ವಿತೀಯ ಸ್ಥಾನ, ಅಕ್ಷಯ ಎಂ. ನಾಯ್ಕ – 110 ಮೀ ಹರ್ಡಲ್ಸ್ ಹಾಗೂ 400 ಮೀ. ಹರ್ಡಲ್ಸ್ ದ್ವಿತೀಯ, ಅಭಿಷೇಕ ಎಸ್. ನಾಯ್ಕ – ಚಕ್ರ ಎಸೆತ ಹಾಗೂ ಭರ್ಚಿ ಎಸೆತಗಳಲ್ಲಿ ದ್ವಿತೀಯ ಸ್ಥಾನ, ಧರ್ಮೇಂದ್ರ ಎಸ್. ಗೌಡ – ಉದ್ದ ಜಿಗಿತ ಹಾಗೂ ಟ್ರಿಪಲ್ ಜಂಪ್‌ಗಳಲ್ಲಿ ದ್ವಿತೀಯ ಸ್ಥಾನ, ಮನೋಜ ಎಸ್. ನಾಯ್ಕ – ಎತ್ತರ ಜಿಗಿತ ಪ್ರಥಮ ಸ್ಥಾನ, ಆದಿತ್ಯ ಎಸ್. ಗೌಡ – ಉದ್ದ ಜಿಗಿತ ಪ್ರಥಮ ಸ್ಥಾನ, ಮನೋಜ ವಿ. ಭಂಡಾರಿ – 800 ಮೀ. ಪ್ರಥಮ ಸ್ಥಾನ, ವಿಕಾಸ ಎಚ್. ನಾಯ್ಕ – ಕ್ರಾಸ್ ಕಂಟ್ರಿ ಓಟ ಪ್ರಥಮ ಸ್ಥಾನ, ಲೋಹಿತ ಎನ್. ನಾಯ್ಕ – 400 ಮೀ. ದ್ವಿತೀಯ ಸ್ಥಾನ ಹಾಗೂ ಒಳಾಂಗಣ ಆಟದಲ್ಲಿ ಬಾಲಕರ ಚೆಸ್, ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಅಂತೆಯೇ ಬಾಲಕಿಯರ ವಿಭಾಗದಲ್ಲಿ ಕಾರ್ಮಿನ್ ಪಿ. ಲೀಮಾ– 400 ಮೀ. ಪ್ರಥಮ ಸ್ಥಾನ, ಸ್ಮೃತಿ ಎಸ್. ದೇವಳಿ – ಶಟಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ, ದೃತಿ ನಾಯ್ಕ– ಚೆಸ್ ಪ್ರಥಮ ಸ್ಥಾನ. ಸಹನಾ ತಾಂಡೇಲ್ 200 ಮೀ. ದ್ವಿತೀಯ ಸ್ಥಾನ, ವಿನುತಾ ಜಿ. ಗೌಡ – ಟ್ರಿಪಲ್ ಜಂಪ್ ದ್ವಿತೀಯ ಸ್ಥಾನ, ರಕ್ಷಿತಾ ನಾಯ್ಕ – ಚಕ್ರ ಎಸೆತ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ರೇಣುಕಾ ಮೇಸ್ತ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಉಪನ್ಯಾಸಕ ವೃಂದ ತುಂಬು ಹೃದಯದಿಂದ ಅಭಿನಂದಿಸಿದೆ.