ಹೊನ್ನಾವರ: ಸಾಲ್ಕೋಡ್ ಹೊಳೆಗೆ ಮರದ ದಿಬ್ಬ ಹಾಗೂ ಕಸ ಶೇಖರಣೆಗೊಂಡು ಮನೆ ಹಾಗೂ ತೋಟಗಳಿಗೆ ಹಾನಿಯಾಗುತ್ತಿರುವುದರಿಂದ ಕಸ ತೆರವು ಮಾಡುವಾಗ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾಲ್ಕೋಡ್ ಹೊಳೆಗೆ ಇರುವ ಸೇತುವೆಗೆ ಭಾರಿ ಗಾತ್ರದ ಮರದ ದಿಬ್ಬು ಹಾಗೂ ಕಸ ಶೇಖರಣೆಗೊಂಡು ಎರಡು ಮನೆ ಸೇರಿದಂತೆ ಹೊಳೆಯ ಪಕ್ಕದ 50ಕ್ಕೂ ಹೆಚ್ಚಿನ ಮನೆಯ ತೋಟಗಳಿಗೆ ನೀರು ನುಗ್ಗುತ್ತಿತ್ತು. ಜುಲೈ ತಿಂಗಳಿಡಿ ಈ ಭಾಗದ ತೋಟಗಳಲ್ಲಿ ನೀರು ನಿಂತಿತ್ತು. ಹಲವು ಬಾರಿ ಗ್ರಾ.ಪಂ ಸೇರಿ ವಿವಿಧ ಇಲಾಖೆಗೆ ಸ್ಥಳಿಯರು ಮನವಿ ಸಲ್ಲಿಸಿದ್ದರು. ಕಸ ತೆರವು ಮಾಡಿ ನೀರು ಸರಾಗವಾಗಿ ಹೋಗುವಂತೆ ಗ್ರಾ.ಪಂ. ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರು. ಭಾರಿ ಗಾತ್ರದ ಮರದ ದಿಬ್ಬು ತೆಗೆಯಲೇಬೇಕಾಗಿರುದರಿಂದ ಸಮಸ್ಯೆ ಅವಲೋಕಿಸಿ ಪರಿಹಾರ ಕಂಡುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಯಮುನಾ ನಾಯ್ಕ, ಉಪಾಧ್ಯಕ್ಷ ಬಾಲಚಂದ್ರ ನಾಯ್ಕ ಸದಸ್ಯರಾದ ಗಣಪತಿ ಭಟ್, ನಾಗೇಶ ಗೌಡ, ಪಾತ್ರೂನ್ ಮೆಂಡಿಸ್, ಗ್ರಾ.ಪಂ.ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಬಿಜೆಪಿ ಮುಖಂಡರು, ಗ್ರಾಮಸ್ಥರು, ಇದ್ದರು