ಯಲ್ಲಾಪುರ: ಎಪಿಎಂಸಿಯಲ್ಲಿ ಅಡಕೆ ಟೆಂಡರ್ ಪ್ರಕ್ರಿಯೆ ಶುಕ್ರವಾರ ಪುನಃ ಆರಂಭಗೊಂಡಿದೆ. ಟೆಂಡರ್ ಪ್ರಕ್ರಿಯೆಯಲ್ಳಿ ನ್ಯೂನತೆಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಅಡಕೆ ವ್ಯಾಪಾರಸ್ಥರು ಹಾಗೂ ದಲಾಲರು ಗುರುವಾರ ಅಡಕೆ ವ್ಯಾಪಾರ ಸ್ಥಗಿತಗೊಳಿಸಿದ್ದರು. ಬೇಡಿಕೆ ಈಡೇರಿಸುವಂತೆ ಎಪಿಎಂಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಅಡಕೆ ವ್ಯವಹಾರಸ್ಥರು ಹಾಗೂ ದಲಾಲರೊಂದಿಗರ ಸಭೆ ನಡೆಸಿದ ಅಧಿಕಾರಿಗಳು, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ಹಿಂಪಡೆಯಲಾಗಿತ್ತು.
ಶುಕ್ರವಾರದಿಂದ ವ್ಯಾಪಾರ ಪುನಃ ಆರಂಭಗೊಂಡಿದ್ದು, ಮಾರುಕಟ್ಟೆಯಲ್ಲಿ ಮತ್ತೆ ಜೀವಕಳೆ ಬಂದಿದೆ. ವ್ಯಾಪಾರ ಜೋರಾಗಿದ್ದು, 2-3 ದಿವಸಗಳ ಕಾಲ ಮಾರಾಟಕ್ಕೆ ಸಾಕಾಗುವಷ್ಟು ಅಡಕೆ ದಾಸ್ತಾನು ಬಂದಿದೆ.