ಸಿಹಿಫಲದ ಮಾವಿನ ಗಿಡ ನೆಟ್ಟು ಅಭಿಯಾನಕ್ಕೆ ಚಾಲನೆ
ಸಿದ್ದಾಪುರ: ತಾಯಿ ಭಾರತಮಾತೆಯ ಹೆಸರಿನಲ್ಲಿ ಸಸಿಯನ್ನು ನೆಡುವ ಮೂಲಕ ಒಂದು ಮಹತ್ ಕಾರ್ಯಕ್ಕೆ ಶ್ರೀಮನ್ನೆಲೆಮಾವು ಮಠದ ಪರಮ ಪೂಜ್ಯ ಶ್ರೀಗಳು ಮಾದರಿ ನಡೆಯನ್ನು ಹಾಕಿಕೊಟ್ಟಿದ್ದಾರೆ.
ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಸಿಹಿ ಫಲ ಬಿಡುವ ಮಾವಿನ ಸಸಿಯನ್ನು ನೆಡುವ ಮೂಲಕ ಶ್ರೀ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿ ಬಿ. ಎಸ್. ಮಾಬ್ಲೇಶ್ವರ, ಕಾಶೀನಾಥ್ ಪಾಟೀಲ್, ಶ್ರೀಮಠದ ಆಡಳಿತ ಮತ್ತು ಕೃಷಿ ಸಮಿತಿಯ ಸದಸ್ಯರು ಭಾಗವಹಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ:
ಮಠದ ಸಂನ್ಯಾಸಿಯೋರ್ವರು ತಾಯಿ ಭಾರತಮಾತೆಯ ಹೆಸರಿನಲ್ಲಿ ಸಸಿಯನ್ನು ನೆಡುವ ಮೂಲಕ ಭಕ್ತ ಸಮುದಾಯಕ್ಕೆ ಆದರ್ಶದ ಹಾದಿಯನ್ನು ತೋರಿದ್ದಾರೆ. ಸಮಸ್ತ ದೇಶವಾಸಿಗಳಿಗೆ ಭಾರತಾಂಬೆಯೇ ತಾಯಿಯಾಗಿದ್ದು, ಆಕೆಯ ರಕ್ಷಣೆ ನಮ್ಮೆಲ್ಲರ ಹೊಣೆ. ಜೊತೆಗೆ ದೇಶ ಸದಾ ಹಸಿರಾಗಿ, ಸಮೃದ್ಧಿಯಿಂದ, ಸಶಕ್ತವಾಗಿ ಉಳಿಯಲು ಜನರ ಸಹಕಾರ ಅತ್ಯವಶ್ಯ. ಪ್ರತಿಯೊಬ್ಬರಲ್ಲಿಯೂ ದೇಶಭಕ್ತಿ ಜಾಗೃತಾವಸ್ಥೆಯಲ್ಲಿರಬೇಕು. ಹಾಗಾದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಟುತ್ತಿದೆ. ಮತ್ತು ಪೂಜನೀಯ ಶ್ರೀಗಳ ಕಾರ್ಯವನ್ನು ಶ್ಲಾಘಿಸಿ, ಅಭಿನಂದಿಸಿದ್ದಾರೆ.