Slide
Slide
Slide
previous arrow
next arrow

ಹೊಸ ಆಧಾರ್ ನೊಂದಣಿ, ತಿದ್ದುಪಡಿಗೆ ಅವಕಾಶ : ಡಿಸಿ ಲಕ್ಷ್ಮಿಪ್ರಿಯಾ

300x250 AD

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 137 ಆಧಾರ್ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಎಲ್ಲಾ ಕೇಂದ್ರಗಳಲ್ಲಿ ಹೊಸದಾಗಿ ಆಧಾರ್ ನೋಂದಣಿ, ತಿದ್ದುಪಡಿ ಕಾರ್ಯಗಳನ್ನು ಮಾಡಲಾಗುತ್ತಿದೆ.
ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ ಮತ್ತು ಲಿಂಗ ಬದಲಾವಣೆಗೆ ಕೇವಲ ಒಂದು ಬಾರಿ, ಹೆಸರು ಬದಲಾವಣೆಗೆ 2 ಬಾರಿ ಅವಕಾಶವಿದ್ದು, ವಿಳಾಸ ಬದಲಾವಣೆಗೆ ಯಾವುದೇ ಮಿತಿಯಿರುವುದಿಲ್ಲ.
ಜಿಲ್ಲೆಯ 19 ಅಟಲ್ ಜನ ಸ್ನೇಹಿ ಕೇಂದ್ರಗಳು, 41 ಕರ್ನಾಟಕ ಒನ್ ಕೇಂದ್ರಗಳು, 1 ಜಿಲ್ಲಾ ಜನಸ್ಪಂದನ ಕೇಂದ್ರ, 13 ಸಾಮಾನ್ಯ ಸೇವಾ ಕೇಂದ್ರಗಳು, 45 ಭಾರತೀಯ ಅಂಚೆ ಕಚೇರಿಗಳು ಮತ್ತು 11 ಬ್ಯಾಂಕ್ ಗಳಲ್ಲಿ ಸೇರಿದಂತೆ ಒಟ್ಟು 137 ಆಧಾರ್ ಸೇವಾ ಕೇಂದ್ರಗಳಲ್ಲಿ ಆಧಾರ್ ಸಂಬAಧಿತ ಸಮಸ್ಯೆಗಳನ್ನು ಸರಿಪಡಿಸಲಾಗುತ್ತಿದೆ. ಅಲ್ಲದೇ ಯು.ಐ.ಡಿ.ಐ. ತಂತ್ರಾಂಶದಲ್ಲಿ (ಆನ್‌ಲೈನ್) ಮೂಲಕ ಆಧಾರ ದಾಖಲೆ ನವೀಕರಣ ಅವಕಾಶ ಕೂಡಾ ಇದ್ದು, ಆಧಾರ್ ಕಾರ್ಡ್ ನಲ್ಲಿ 18 ವರ್ಷ ಮೇಲ್ಪಟ್ಟವರ ಹೆಸರು ಬದಲಾವಣೆ ಇದ್ದಲ್ಲಿ Voter ID ಸರಿಪಡಿಸಿಕೊಂಡು ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ತಿಳಿಸಿರುತ್ತಾರೆ.
ಆಧಾರ್ ಮೊಬೈಲ್ ಅಪ್ಡೇಶನ್ ಕುರಿತು ಉತ್ತರ ಕನ್ನಡ ಜಿಲ್ಲೆಯಲ್ಲಿ 16,43,471 ಆಧಾರ್ ಸೃಜಿಸಲಾಗಿದ್ದು, 15,38,406 ಮೊಬೈಲ್ ಸೀಡೆಡ್ ಆಗಿದ್ದು, ಒಟ್ಟೂ 1,05,065 ಬಾಕಿ ಇರುತ್ತದೆ. ಬಾಕಿ ಇರುವ ಆಧಾರ್ ಕಾರ್ಡ್ಗಳನ್ನು ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಅಂಚೆ ಕಛೇರಿ ಕೇಂದ್ರ, ನಾಡಕಛೇರಿಗಳಲ್ಲಿ ನವೀಕರಿಸಿಕೊಳ್ಳುವಂತೆ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top