ಶಿರಸಿ: ಯಲ್ಲಾಪುರದ ಕ್ರಿಯೇಟಿವ್ ತರಬೇತಿ ಕೇಂದ್ರದಲ್ಲಿರುವ ಗ್ರೀನ್ ಕೇರ್ ಸಂಸ್ಥೆಯ ಬ್ಯೂಟಿಷನ್ ಮತ್ತು ಬೇಸಿಕ್ ಫ್ಯಾಶನ್ ಡಿಸೈನಿಂಗ್ ತರಬೇತಿಯ ವಿದ್ಯಾರ್ಥಿಗಳಿಗೆ ಆ.9ರಂದು ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು ಸಿಡಾಕ್ ಸಂಸ್ಥೆಯ ಉಪ ನಿರ್ದೇಶಕರಾದ ಶಿವಾನಂದ್.ವಿ.ಯಲಿಗಾರ್ ಉದ್ಯಮಶೀಲತೆಯ ಬಗ್ಗೆ ಕಾರ್ಯಗಾರವನ್ನು ನೆರವೇರಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಾನಂದ ಬಿ. ಯಲಿಗಾರ್ ಮತ್ತು ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿಗಳಾದ ಜಿತೇಂದ್ರ ಕುಮಾರ್.ಆರ್. ಎಂ. ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಗ್ರೀನ್ ಕೇರ್ ಸಂಸ್ಥೆಯ ನಿರ್ದೇಶಕರಾದ ಆಶಾ ಡಿಸೋಜ, ಕ್ರಿಯೇಟಿವ್ ತರಬೇತಿ ಕೇಂದ್ರದ ಮಾಲೀಕರಾದ ಶ್ರೀನಿವಾಸ್ ಮುರುಡೇಶ್ವರ್, ಸಿಡಾಕ್ ಸಂಸ್ಥೆಯ ತರಬೇತುದಾರರಾದ ಶಿವರಾಜ್ ಕುಮಾರ್ ಹೆಳವಿ ಮತ್ತು ತರಬೇತಿ ಸಂಸ್ಥೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೌಶಲ್ಯ ವಿಕಾಸದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.