
ಶಿರಸಿ: ಇಲ್ಲಿಮ ಸುಭಾಶ್ಚಂದ್ರ ಬೋಸ್ ಕಾರ್ಯಪಡೆ, ವಿದ್ಯಾನಗರ ರುದ್ರಭೂಮಿ ಸಮಿತಿ, ಶಿರಸಿ ಅಂಚೆ ಇಲಾಖೆ, ಶಿರಸಿ, ಯುವ ಬ್ರಿಗೇಡ್ ಶಿರಸಿ ನಿವೃತ್ತ ಸೈನಿಕರ ಸಂಘ, ಶಿರಸಿ ಇವರುಗಳ ಸಹಕಾರದೊಂದಿಗೆ ‘ನನ್ನ ದೇಶ ನನ್ನ ಹೊಣೆ’ ಅಂಗವಾಗಿ ‘ಕಾರ್ಗಿಲ್ ವಿಜಯೋತ್ಸವದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ’ ಕಾರ್ಯಕ್ರಮವನ್ನು ಆ.15, ಗುರುವಾರ ಬೆಳಿಗ್ಗೆ 9.30ಕ್ಕೆ ನಗರದ ರಂಗಧಾಮದಲ್ಲಿ ಆಯೋಜಿಸಲಾಗಿದೆ.
ಬೆಳಿಗ್ಗೆ 9-30 ರಿಂದ 12-00ರವರೆಗೆ ಶಾಲಾ ಮಕ್ಕಳಿಗಾಗಿ ಅಂಚೆ ಇಲಾಖೆಯ ಸಹಯೋಗದೊಂದಿಗೆ ಅಂಚೆ ಚೀಟಿ ಪ್ರದರ್ಶನ ಮತ್ತು ವಿದ್ಯಾರ್ಥಿಗಳಿಗೆ ಅಂಚೆ ಇಲಾಖೆಯ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಮಧ್ಯಾಹ್ನ 12-00 ರಿಂದ 1-00 ಘಂಟೆಯವರೆಗೆ ನಿವೃತ್ತ ಸೈನಿಕರಾದ ಸುಬೇದಾರ ರಾಮು ಅವರಿಂದ ಕಾರ್ಗಿಲ್ ಕದನದ ಸಂಪೂರ್ಣ ಮಾಹಿತಿಯನ್ನೊಳಗೊಂಡ ಸ್ವಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದ್ದು, ಶಿರಸಿಯ ನಿವೃತ್ತ ಸೈನಿಕರಿಗೆ ಕಾರ್ಯಪಡೆಯ ವತಿಯಿಂದ ವಿಜಯೋತ್ಸವದ ನೆನಪಿಗಾಗಿ ಗೌರವ ಸಮರ್ಪಣೆ ನಡೆಯಲಿದೆ.