ದಾಂಡೇಲಿ: ನಗರದ ವಿವಿಧೆಡೆಗಳಲ್ಲಿ ಈ ಹಿಂದೆ ಕಳ್ಳತನವಾಗಿದ್ದ ಹಾಗೂ ಕಳೆದು ಹೋಗಿದ್ದ ಒಟ್ಟು 5 ಮೊಬೈಲ್ ಫೋನ್ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿ ಆ ಮೊಬೈಲ್ ಗಳ ವಾರೀಸುದಾರರನ್ನು ಠಾಣೆಗೆ ಕರೆಯಿಸಿ ಪೊಲೀಸ್ ಉಪಾಧೀಕ್ಷಕರಾದ ಶಿವಾನಂದ ಮದರಕಂಡಿಯವರ ಅಧ್ಯಕ್ಷತೆಯಲ್ಲಿ ಗುರುವಾರ ಮರಳಿಸಲಾಯಿತು.
ಈ ಸಂದರ್ಭದಲ್ಲಿ ಶಿವಾನಂದ ಮದರಖಂಡಿ ಮಾತನಾಡಿ ಸಿಇಐಆರ್ ಪೋರ್ಟಲ್ ಬಗ್ಗೆ ಹಾಗೂ ಪೋರ್ಟಲಿನ ಕಾರ್ಯವಿಧಾನದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಪೊಲೀಸ್ ವೃತ್ತ ನಿರೀಕ್ಷಕರಾದ ಭೀಮಣ್ಣ ಸೂರಿ ಮಾತನಾಡಿ ಸಿಇಐಆರ್ ಪೋರ್ಟಲ್ ಮೂಲಕ ಮೊಬೈಲ್ಗಳನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿ, ಸಾರ್ವಜನಿಕರು ಸಿಇಐಆರ್ ಪೋರ್ಟಲ್ ಬಗ್ಗೆ ಜನರಿಗೆ ತಿಳಿಸುವಂತೆ ಕೋರಿದರು.
ಮೊಬೈಲ್ ಕಳೆದುಕೊಡು ನಿರಾಶೆಯಲಿದ್ದವರು ಮೊಬೈಲ್ ಮರಳಿ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಪೊಲೀಸರ ಈ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಗರ ಠಾಣೆಯ ಪಿಎಸ್ಐಗಳಾದ ಐ.ಆರ್. ಗಡ್ಡೇಕರ್ ಹಾಗೂ ಯಲ್ಲಪ್ಪ ಎಸ್. ಉಪಸ್ಥಿತರಿದ್ದರು.