ದಾಂಡೇಲಿ : ಬಿಜೆಪಿ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ರಾಷ್ಟ್ರೀಯ ಕೈ ಮಗ್ಗ ದಿನಾಚರಣೆ ಕಾರ್ಯಕ್ರಮವನ್ನು ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಮಹಿಳಾ ಟೈಲರ್‌ಗಳಾದ ಅಂಬಿಕಾ ಧೆಲಿ, ಉಮಾ ಪುರೋಹಿತ್ ಮತ್ತು ಲಲಿತಾ ಬಂಡಿ ಅವರನ್ನು ಸನ್ಮಾನಿಸಲಾಯಿತು.
ಮಹಿಳಾ ಮೋರ್ಚಾದ ಅಧ್ಯಕ್ಷೆ ಜಯಶ್ರೀ ನೇಮತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಬುದ್ದಿವಂತಗೌಡ ಪಾಟೀಲ, ಪ್ರಮುಖರಾದ ಶಾರದ ಪರಶುರಾಮ, ಸಾವಿತ್ರಿ ಬಡಿಗೇರ, ಗೀತಾ ಶಿಕಾರಿಪುರ, ಮೆಘಾ ಗೌಡ, ದೇವಕ್ಕ ಕೆರಮನಿ, ಅಶ್ವಿನಿ ಬಾಲಮಣಿ, ಉಮಾ ಹನಮಸಾಗರ, ಸಂಜಾತ ಗಡದ, ಮಂಗಲಾ ವಾಡೆಕರ್, ನಂದಿನಿ ಶೆಲ್ಟ್, ಸುಜಾತ ಪಾಟೀಲ .ಜಿಲ್ಲಾ ಮೋರ್ಚಾ ಪದಾಧಿಕಾರಿಗಳು, ಮಂಡಲ ಮಹಿಳಾ ಮೋರ್ಚ ಪದಾಧಿಕಾರಿಗಳು , ಮಹಿಳಾ ನಗರ ಸಭಾ ಸದಸ್ಯರು ಹಾಗೂ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.