ಶಿರಸಿ: ನಗರದ ಲಯನ್ಸ್ ಶಾಲೆಯಲ್ಲಿ ವಾಣಿಜ್ಯ ತೆರಿಗೆಯ ನಿವೃತ್ತ ಅಧಿಕಾರಿಗಳಾದ ಸುಬ್ರಾಯ ಎಂ. ಹೆಗಡೆ ಗೌರಿಬಣ್ಣಿಗೆ ಯು.ಪಿ.ಎಸ್.ಸಿ ಮತ್ತು ಕೆ.ಪಿ.ಎಸ್.ಸಿ ನಡೆಸುವ ಐ.ಎ.ಎಸ್ ಮತ್ತು ಕೆ.ಎ.ಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಹೇಗಿರಬೇಕು ಎಂದು ವಿವರಿಸಿದರು.
ನಿವೃತ್ತ ಪ್ರಾಧ್ಯಾಪಕರಾದ ಆರ್.ಎಸ್. ಹೆಗಡೆ ಸ್ಪರ್ಧಾತ್ಮಕ ಪರೀಕ್ಷೆಗಳು ನಮ್ಮಲ್ಲಿ ವಿಭಿನ್ನವಾಗಿ ಚಿಂತಿಸುವ ಕಲೆಯನ್ನು ಕಲಿಸುತ್ತದೆ ಎಂದು ವಿವರಿಸಿದರು. ನಿವೃತ್ತ ಅಧಿಕಾರಿಗಳಾದ ಜಿ.ಎಸ್.ಹೆಗಡೆ ನೇಚರ್ ಈಸ್ ಎ ಗ್ರೇಟ್ ಟೀಚರ್ ಎನ್ನುತ್ತಾ ಪ್ರಕೃತಿಯಿಂದ, ಪತ್ರಿಕೆಗಳಿಂದ ಜ್ಞಾನವನ್ನು ವರ್ಧಿಸಿಕೊಳ್ಳಬಹುದು ಎಂಬ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮವು ಗಣಪತಿ ಸ್ತುತಿಯೊಂದಿಗೆ ಸಿಂಚನಾ ಶೆಟ್ಟಿಯಿಂದ ಆರಂಭಗೊಂಡಿತು. ಲಯನ್ ಅಶ್ವತ್ ಹೆಗಡೆ ಎಲ್ಲರನ್ನೂ ಸ್ವಾಗತಿಸಿದರು. ಪ್ರಾಂಶುಪಾಲರಾದ ಶಶಾಂಕ ಹೆಗಡೆ ಪ್ರಾಸ್ತಾವಿಕವನ್ನು ನುಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಲಯನ್ ಕೆ.ಬಿ. ಲೋಕೇಶ್ ಹೆಗಡೆ ಉಪಸ್ಥಿತರಿದ್ದರು. ಸಿಎ ವೇಣುಗೋಪಾಲ್ ಹೆಗಡೆ ವಂದನಾರ್ಪಣೆಯನ್ನು ಗೈದರು. ಕಾರ್ಯಕ್ರಮವನ್ನು ಸಹ ಶಿಕ್ಷಕ ಗಣಪತಿ ಗೌಡ ನಿರೂಪಿಸಿದರು.