ಶಿರಸಿ: ತಾಲೂಕಿನ ಇಸಳೂರಿನ ಶ್ರೀ ರಾಜರಾಜೇಶ್ವರೀ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆ, ಇಸಳೂರಿನ ಅನೇಕ ವಿದ್ಯಾರ್ಥಿಗಳು ಕಳೆದ ಶೈಕ್ಷಣಿಕ ವರ್ಷ 2023-24ರಲ್ಲಿ ಏರ್ಪಡಿಸಿದ್ದ ಓಲಿಂಪಿಯಾಡ್ ಹಾಗೂ ಸಾಮಾನ್ಯ ಜ್ಞಾನ ಪರೀಕ್ಷೆಗಳಲ್ಲಿ ಪಾಲ್ಗೊಂಡಿದ್ದರು. ಓಲಿಂಪಿಯಾಡ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಟ್ಟು 20 ಮಕ್ಕಳು ಗೋಲ್ಡ್ ಮೆಡಲ್ ಆಫ್ ಡಿಸ್ಟಿಂಕ್ಷನ್, 78 ಮಕ್ಕಳು ಗೋಲ್ಡ್ ಮೆಡಲ್ ಆಫ್ ಎಕ್ಸಲೆನ್ಸ್, 4 ಮಕ್ಕಳು ನಗದು ಬಹುಮಾನ ಹಾಗೂ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಇಂಟರ್‌ನ್ಯಾಷನಲ್ ಟೊಪ್ ರ‍್ಯಾಂಕಿಂಗ್‌ನಲ್ಲಿ 37 ಮಕ್ಕಳು, ಕರ್ನಾಟಕ ಜೋ಼ನಲ್ ಎವರೇಜ್‌ನಲ್ಲಿ 20 ಮಕ್ಕಳು ರ‍್ಯಾಂಕ್ ಗಳಿಸಿದ್ದಾರೆ.
ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ 10ನೇ ತರಗತಿಯ ಕುಮಾರಿ ಸ್ಪೂರ್ತಿ ಹೆಗಡೆ, 9ನೇ ತರಗತಿಯ ಕುಮಾರಿ ನಿತ್ಯಶ್ರೀ ಭಟ್, 8ನೇ ತರಗತಿಯ ಕುಮಾರ್ ಕೌಶಿಕ ಎಸ್. ಮತ್ತು 7ನೇ ತರಗತಿಯ ಕುಮಾರಿ ಪ್ರಗತಿ ಭಟ್ ತಲಾ ರೂ.1000 ಹಾಗೂ ರೂ.500 ಗಳ ನಗದು ಬಹುಮಾನವನ್ನು ಪಡೆದಿದ್ದಾರೆ. ಮಕ್ಕಳ ಅತ್ಯುತ್ತಮ ಸಾಧನೆಗೆ ಶ್ರೀನಿಕೇತನ ಶಾಲೆಯ ಪ್ರಾಂಶುಪಾಲರಾದ ವಸಂತ್ ಭಟ್, ಸಮಿತಿಯ ಸಂಚಾಲಕರಾದ ಶ್ರೀಮತಿ ಶ್ವೇತಾ ಹೆಗಡೆ, ಸಮಿತಿಯ ಸದಸ್ಯರು ಹಾಗೂ ಶಿಕ್ಷಕ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.