Slide
Slide
Slide
previous arrow
next arrow

ಲಿಂಗನಮಕ್ಕಿಯಿಂದ ನೀರು ಬಿಡುಗಡೆ: ನೆರೆ ಸಮಸ್ಯೆ ಎದುರಿಸಲು ಸಕಲ ಸಿದ್ಧತೆ: ಡಿಸಿ ಮಾಹಿತಿ

300x250 AD

ಹೊನ್ನಾವರ : ಶಿವಮೊಗ್ಗದ ಲಿಂಗನಮಕ್ಕಿ ಜಲಾಶಯದಲ್ಲಿ ನೀರು ಗರಿಷ್ಟ ಮಟ್ಟ ತಲುಪಿದರೆ ಮುಂಜಾಗೃತಾ ಕ್ರಮವಾಗಿ ನೀರನ್ನು ಹೊರಬಿಡುವಂತೆ ಕೆಪಿಸಿ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ತಿಳಿಸಿದರು.

ತಾಲೂಕಿನ ಗೇರುಸೊಪ್ಪ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ನೆರೆ ತಡೆಯಲು ಎಲ್ಲಾ ಮುಂಜಾಗೃತೆಯನ್ನು ಕೈಗೊಳ್ಳಲಾಗಿದೆ ಎಂದ ಅವರು, ಲಿಂಗನಮಕ್ಕಿಯಿಂದ ಆರು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು ಗೇರುಸೊಪ್ಪ ಜಲಾನಯನ ಪ್ರದೇಶದಲ್ಲಿ ಆರರಿಂದ ಎಂಟು ಸಾವಿರ ಕ್ಯೂಸೆಕ್ಸ್ ನೀರು ಬರುತ್ತಿದ್ದು ಜಲಾಶಯದಿಂದ 20 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುವುದು ಎಂದರು.

ಸದ್ಯ 50 ಸಾವಿರ ಕ್ಯುಸೆಕ್ ನೀರನ್ನು ಹೊರಬಿಟ್ಟರೇ 163 ಕುಟುಂಬಗಳಿಗೆ ಸಮಸ್ಯೆಯಾಗಲಿದ್ದು ಎಲ್ಲರನ್ನು ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಿದ್ದೇವೆ. ನೀರು ಬಿಟ್ಟರೆ, ಎಲ್ಲೂ ಸಮಸ್ಯೆ ಆಗದಂತೆ ಜಿಲ್ಲಾಡಳಿತ ಮುಂಜಾಗೃತೆ ವಹಿಸಿದೆ ಎಂದರು.

ಗೇರುಸೊಪ್ಪ ಜಲಾಶಯದಿಂದ 70 ಸಾವಿರ ಕ್ಯುಸೆಕ್ಸ್ ನೀರನ್ನ ಬಿಟ್ಟರೇ 986 ಮನೆಗೆ ಸಮಸ್ಯೆ ಆಗಲಿದೆ. 1 ಲಕ್ಷ ಕ್ಯುಸೆಕ್ಸ್ ನೀರನ್ನ ಹೊರಬಿಟ್ಟರೇ ಸುಮಾರು 3500 ಮನೆಗಳಿಗೆ ಸಮಸ್ಯೆ ಆಗಲಿದೆ. ಸದ್ಯ 55 ಮೀಟರ್ ಜಲಾಶಯದ ಎತ್ತರವಿದ್ದು 46 ಮೀಟ‌ರ್ ನೀರನ್ನ ಗರಿಷ್ಠ ಮಿತಿಯಾಗಿ ಇಟ್ಟುಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

300x250 AD

ಕಾಳಜಿ ಕೇಂದ್ರ ಪರಿಶೀಲನೆ ::
ಜಿಲ್ಲಾಧಿಕಾರಿಗಳು ತಾಲೂಕಿನ ಪ್ರವಾಹ ಪ್ರದೇಶಕ್ಕೆ ಹಾಗೂ ಉಪ್ಪೊಣಿ ಗ್ರಾ. ಪಂ. ಸರಳಗಿ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾನ್ಯ ಸಹಾಯಕ ಆಯುಕ್ತರು ಭಟ್ಕಳ, ತಹಶೀಲ್ದಾರ ಹೊನ್ನಾವರ, ನೋಡಲು ಅಧಿಕಾರಿಗಳು, ಪಿ.ಡಿ.ಒ,ಉಪ ತಹಶೀಲ್ದಾರ, ಕಂದಾಯ ನಿರೀಕ್ಷಕರ,ಗ್ರಾ.ಆ.ಅಧಿಕಾರಿಗಳು ಹಾಜರಿದ್ದರು.

ಅಪ್ಸರಕೊಂಡ ಗುಡ್ಡ ಪ್ರದೇಶಕ್ಕೆ ಭೇಟಿ :
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಹೊನ್ನಾವರ ತಾಲೂಕಿನ ಅಪ್ಸರಕೊಂಡ ಗುಡ್ಡ ಕುಸಿತದ ಕುರಿತು ಪರಿಶೀಲಿಸಿ ಜನರಿಂದ ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದರು, ಈ ಸಂದರ್ಭದಲ್ಲಿ ತಹಸೀಲ್ದಾರ ಹೊನ್ನಾವರ, ಡಿಸಿಎಫ್, ಆರ್ ಎಫ್ ಓ , ನೋಡಲ್ ಅಧಿಕಾರಿ, ಉಪತಹಸೀಲ್ದಾರ್ ಮಂಕಿ , ಕಂ.ನೀ ಮಂಕಿ,ಗ್ರಾ ಆ ಅ ಕೆಳಗಿನೂರು ಹಾಜರಿದ್ದರು.

Share This
300x250 AD
300x250 AD
300x250 AD
Back to top