ದೇವರನಾಡಲ್ಲಿ ಆರ್.ಎಸ್.ಎಸ್. ಸೇವೆಗೆ ಜನತೆಯ ಶ್ಲಾಘನೆ | ಸಮಾಜದ ಕಷ್ಟಕ್ಕೆ ಸ್ಪಂದಿಸಿದ್ದು ದೇಶಭಕ್ತರ ಸಂಘಟನೆ
ಕೇರಳ: ದೇಶವಿಖ್ಯಾತ ಖ್ಯಾತ ಪ್ರವಾಸಿ ತಾಣವಾಗಿರುವ ವಯನಾಡಿನಲ್ಲಿ ಭೂಕುಸಿತದ ನಂತರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಈ ದುರಂತದಲ್ಲಿ ಇಲ್ಲಿಯವರೆಗೆ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅನೇಕ ಕನ್ನಡಿಗರೂ ಸಹ ಕಷ್ಟದ ಪರಿಸ್ಥಿತಿಯನ್ನು ಸಿಲುಕಿಕೊಂಡಿದ್ದು, ಸಂತ್ರಸ್ತರ ನೆರವಿಗೆ ಅನೇಕ ಜನರು ಮತ್ತು ಸಂಘ ಸಂಸ್ಥೆಗಳು ಮುಂದೆ ಬರುತ್ತಿವೆ. ಅದರಲ್ಲಿಯೂ ವಿಶೇಷವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿವಾರದಲ್ಲೊಂದಾದ ಸೇವಾ ಭಾರತೀ ಸಂಸ್ಥೆಯ ಸ್ವಯಂಸೇವಕರು ಸಹ ಜನರಿಗೆ ಸಹಾಯ ಮಾಡುವಲ್ಲಿ ನಿರತರಾಗಿರುವುದು ದೇಶವ್ಯಾಪಿ ವ್ಯಾಪಕ ಪ್ರಚಾರ ಪಡೆದುಕೊಂಡಿದೆ.
ಕಳೆದೊಂದು ವಾರದಿಂದ ಕೇರಳದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಇದೀಗ ಗುಡ್ಡಗಳು ಕುಸಿದು ಪ್ರವಾಹ ಸ್ಥಿತಿಯೂ ನಿರ್ಮಾಣವಾಗಿದೆ. ಎನ್‌ಡಿಆರ್‌ಎಫ್ ಹಾಗೂ ಇತರರ ಜತೆ ರಕ್ಷಣಾ ಕಾರ್ಯದಲ್ಲಿ ಸೇವಾ ಭಾರತೀ ಕೈಜೋಡಿಸಿದೆ.
ಕೇಳದ ಪ್ರವಾಹ ಪೀಡಿತ ಪ್ರದೇಶದಲ್ಲಿ ನಿರಾಶ್ರಿತರಿಗೆ ಆಹಾರ ಒದಗಿಸುವುದು, ವೈದ್ಯಕೀಯ ವ್ಯವಸ್ಥೆಯಿಂದ ಹಿಡಿದು ಶವಗಳ ಅಂತ್ಯಕ್ರಿಯೆಯವರೆಗೂ ಸೇವಾ ಭಾರತಿಯ ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆ, ವಾಯುಪಡೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳು ಹಗಲು ರಾತ್ರಿ ಎನ್ನದೇ ಜನರಿಗಾಗಿ ಹುಡುಕಾಟ ನಡೆಸುತ್ತಿವೆ. ಇದರೊಂದಿಗೆ ಸೇವಾ ಭಾರತಿಯ ಸ್ವಯಂಸೇವಕರು ಸಹ ಮುಂಚೂಣಿಯಲ್ಲಿದ್ದಾರೆ ಮತ್ತು ಜನರಿಗೆ ಸಹಾಯ ಮಾಡುವಲ್ಲಿ ನಿರತರಾಗಿದ್ದಾರೆ.
ಕೇರಳದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಇದೇ ಕಾರಣಕ್ಕೆ ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಕಣ್ಣು ಹಾಯಿಸಿದಷ್ಟು ದೂರ ನೀರೇ ಗೋಚರಿಸುತ್ತಿದೆ.
ಕೇರಳ ರಾಜ್ಯದಲ್ಲಿ ಕಳೆದ ಐದಾರು ದಶಕಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಮತ್ತು ಕಮ್ಯುನಿಸ್ಟ್ ಕಾರ್ಯಕರ್ತರ ನಡುವೆ ವಿವಾದ, ಘರ್ಷಣೆಗಳು ನಡೆಯುತ್ತಲೇ ಬಂದಿವೆ. ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣಕ್ಕೆ ಕೊಲೆ, ಹಲ್ಲೆಗಳು ನಡೆದಿವೆ. ಆದರೆ ಕಷ್ಟದ ಸಮಯದಲ್ಲಿ, ಸಮಾಜಕ್ಕೆ ಆಪತ್ತು ಸಂಭವಿಸಿದ ಸಮಯದಲ್ಲಿ ಆರ್ಎಸ್ಎಸ್ ಮೊದಲು ಸೇವೆಗಾಗಿ ನಿಲ್ಲುತ್ತದೆ. ಮತ್ತು ಸಮಾಜದ ಹಿತಕ್ಕಾಗಿ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಾರೆ.