ಶಿರಸಿ: ತಾಲೂಕಿನ ಇಸಳೂರಿನ ಶ್ರೀ ರಾಜರಾಜೇಶ್ವರೀ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆಯಲ್ಲಿ ಆ.1, ಗುರುವಾರದಂದು ಗ್ರೀನ್ಪೀಸ್ ರೋಟರಿ ಇಂಟರ್ಯಾಕ್ಟ್ ಕ್ಲಬ್ನ್ನು ಉದ್ಘಾಟಿಸಲಾಯಿತು.
ಸಭಾಕಾರ್ಯಕ್ರಮವನ್ನು ದೀಪ ಪ್ರಜ್ವಲನ ಹಾಗೂ ಪ್ರಾರ್ಥನಾ ಗೀತೆಯೊಂದಿಗೆ ಆರಂಭಿಸಲಾಯಿತು. ರೋಟರಿ ಅಧ್ಯಕ್ಷೆ ಡಾ. ಸುಮನ್ ಹೆಗಡೆ ಮಾತನಾಡಿ ರೋಟರಿ ಕ್ಲಬ್ನ ಮಹತ್ವ, ಬೆಳವಣಿಗೆ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಸಂಕ್ಷಿಪ್ತವಾಗಿ ನುಡಿದರು. ಅನಂತರ ಡಾ. ದಿನೇಶ ಹೆಗಡೆ ಮಾತನಾಡಿ ಪ್ರಸ್ತುತದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಡೆಂಗ್ಯೂ ಜ್ವರ ಮತ್ತು ಈಡೀಸ್ ಸೊಳ್ಳೆಗಳ ಬಗ್ಗೆ ಮಾಹಿತಿ ನೀಡಿದರು. ಯೋಗ ಮತ್ತು ವ್ಯಾಯಾಮವನ್ನು ಪ್ರತಿದಿನವು ಅಭ್ಯಸಿಸಿ ದೇಹದಲ್ಲಿರುವ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. ಈ ಕಾರ್ಯಕ್ರಮದಲ್ಲಿ ಶಿರಸಿಯ ರೋಟೆರಿ ಕ್ಲಬ್ನಿಂದ ಹರೀಶ ಹೆಗಡೆ, ನಾಗರಾಜ ಭಟ್, ಆರ್.ಏ.ಖಾಜಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶ್ರೀನಿಕೇತನ ಶಾಲೆಯ ಪ್ರಾಂಶುಪಾಲ ವಸಂತ್ ಭಟ್, ಉಪಪ್ರಾಂಶುಪಾಲೆ ಶ್ರೀಮತಿ ವಸುಧಾ ಹೆಗಡೆ ಹಾಗೂ ಶಾಲೆಯ ಇಂಟರ್ಯಾಕ್ಟ್ ಕ್ಲಬ್ನ ಸಹಾಯಕ ಶಿಕ್ಷಕಿಯರು ಶ್ರೀಮತಿ ಮಂಜುಳಾ ಕೆ. ಮತ್ತು ಕುಮಾರಿ ಲತಾ ಮಡಿವಾಳ ಉಪಸ್ಥಿತರಿದ್ದರು. ಶಾಲೆಯ ಕಾರ್ಯದರ್ಶಿಗಳು ಪ್ರೊ. ಕೆ. ಎನ್. ಹೊಸಮನಿ ಈ ವರ್ಷದ ಗ್ರೀನ್ ಪೀಸ್ ಇಂಟರ್ಯಾಕ್ಟ ಕ್ಲಬ್ನ ನೂತನ ಪದಾಧಿಕಾರಿಗಳಾಗಿ ನಿಯುಕ್ತರಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮವನ್ನು 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಕ್ರಿಸ್ಟಾ ಪಿ. ನಿರೂಪಿಸಿದರು. ವಿದ್ಯಾರ್ಥಿಗಳಾದ ಕುಮಾರ್ ಶ್ರೇಯಸ್ ಹೆಗಡೆ ಎಲ್ಲರನ್ನು ಸ್ವಾಗತಿಸಿದರು ಹಾಗೂ ಕುಮಾರ್ ತ್ರಿಮುಖ ವಿ. ಎಚ್. ವಂದನಾರ್ಪಣೆ ನೀಡಿದರು. ಅನಂತರ ಗಣ್ಯರೆಲ್ಲ ಸೇರಿ ಶಾಲಾ ಆವರಣದಲ್ಲಿ ಸಸಿ ನೆಟ್ಟು ವನಮಹೋತ್ಸವ ಆಚರಿಸಿದರು.
ಅದೇ ದಿನ, ಮಧ್ಯಾಹ್ನದ ಅವಧಿಯಲ್ಲಿ ಶಾಲೆಯ ಸೇವಾದಳ ಶಾಖಾನಾಯಕರು ಸಂತೋಷ ಸಾಲೇರ ಹಾಗೂ ಶಾಖಾನಾಯಕಿ ಶ್ರೀಮತಿ ಪ್ರಭಾವತಿ ದೇವಾಡಿಗ ಇವರ ಉಪಸ್ಥಿತಿಯಲ್ಲಿ ಮಕ್ಕಳಿಗೆ ಬ್ಯಾಂಡ್ಸೆಟ್ನ ತರಬೇತಿಯನ್ನು ರಾಮಚಂದ್ರ ಹೆಗಡೆ, ಜಿಲ್ಲಾಸಂಘಟಕರು ಹಾಗೂ ಕುಮಾರ ನಾಯ್ಕ, ತಾಲೂಕ ಸಮೀತಿ ಕೋಶಾಧ್ಯಕ್ಷರು ಇವರಿಂದ ನೀಡಲಾಯಿತು. ಡ್ರಮ್, ಸಿಂಬಾಲ್, ಬಿಗಿಲ್, ಫ್ಲೂಟ್ ಹಾಗೂ ಟ್ರಂಪೆಟ್ನಂತಹ ಅನೇಕ ವಾದ್ಯಗಳನ್ನು ನುಡಿಸುವ ಬಗೆಯನ್ನು ತಿಳಿಸಿಕೊಡಲಾಯಿತು.