ಶಿರಸಿ: ಜಿಲ್ಲೆಯ ಕ್ಷತ್ರಿಯ ಮರಾಠ ಸಮುದಾಯದ ಹಾಗೂ ಆ ಸಮುದಾಯಗಳ ಉಪಪಂಗಡಗಳ ಜಿಲ್ಲಾ ಮುಖಂಡರಾಗಿರುವ ಪಾಂಡುರಂಗ ವಿ. ಪಾಟೀಲ್ ಅವರು ಕಳೆದ ಹಲವಾರು ವರ್ಷಗಳಿಂದ ಕಾಂಗ್ರೇಸ್ ಪಕ್ಷದ ಸಂಘಟಣೆಗಳಲ್ಲಿ ಮತ್ತು ಹೊರಾಟಗಳಲ್ಲಿ ಸಕ್ರಿಯವಾಗಿ ತೊಡಗಿರುವುದನ್ನು ಗಮನಿಸಿ ಇವರನ್ನು ಕಾಂಗ್ರೇಸ್ ಜಿಲ್ಲಾ ಸಮಿತಿಯ ಇಂಟೆಕ್ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ರಾಜ್ಯ ಅಧ್ಯಕ್ಷ ಡಿ.ಕೆ. ಶಿವಕುಮಾರ ಮತ್ತು ಕಾಂಗ್ರೇಸ್ ಇಂಟೆಕ್ ವಿಭಾಗದ ರಾಜ್ಯಧ್ಯಕ್ಷ ಲಕ್ಷ್ಮಿ ವೆಂಕಟೇಶರ ಆದೇಶದ ಮೇರೆಗೆ ಖಾನಾಪುರದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳಕರ ಸೂಚನೆಯಂತೆ ನೇಮಿಸಿರುವುದಾಗಿ ಜಿಲ್ಲಾ ಕಾಂಗ್ರೇಸ ಸಮಿತಿಯ ಇಂಟೇಕ್ ವಿಭಾಗದ ಜಿಲ್ಲಾಧ್ಯಕ್ಷ ಪ್ರೊ. ಎನ್.ಟಿ. ನಾಯಕ ತಿಳಿಸಿದ್ದಾರೆ. ಇವರಿಗೆ ಆ ಭಾಗದ ಕಾಂಗ್ರೇಸ ಪಕ್ಷದ ನಾಯಕರು/ಮುಂಖಡರ ಮಾರ್ಗದರ್ಶನದಲ್ಲಿ ಜಿಲ್ಲೆಯ ಬನವಾಸಿ, ಯಲ್ಲಾಪುರ ಹಾಗೂ ಮುಂಡಗೋಡ ಮತ್ತು ಹಳಿಯಾಳದ ಬ್ಲಾಕ್ ಇಂಟೆಕ್ ಕಾಂಗ್ರೇಸ್ ಸಮಿತಿಗಳನ್ನು ರಚಿಸುವ ಉಸ್ತುವಾರಿಯನ್ನು ಸಹ ನೀಡಲಾಗಿದೆ ಎಂದು ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇವರು ಕ್ಷತ್ರಿಯ ಮರಾಠ ಸಮುದಾಯದ ಮರಾಠ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಹಾಗೂ ಜಿಲ್ಲಾ ಕಾಂಗ್ರೇಸ್ ಸಮಿತಿ ಸೇವಾದಳ ವಿಭಾಗ ಜಿಲ್ಲಾ ಉಪಾಧ್ಯಕ್ಷರಾಗಿ ಮತ್ತು ಕಾಂಗ್ರೇಸ ಹಿಂದುಳಿದ ವರ್ಗದ ವಿಭಾಗದ ಜಿಲ್ಲಾ ಕಾರ್ಯದರ್ಶಿ ಅಲ್ಲದೇ ಮುಂಡಗೋಡ ಬ್ಲಾಕ್ ಕಾಂಗ್ರೇಸ ಇಂಟೇಕ ಸಮಿತಿಯ ಅಧ್ಯಕ್ಷರಾಗಿ ಕಾಂಗ್ರೇಸ ಪಕ್ಷದಲ್ಲಿ ಸಂಘಟಣೆಯಲ್ಲಿ ತೊಡಗಿರುವುದನ್ನು ಇಲ್ಲಿ ಸ್ಮರಿಸಬಹುದು.