Slide
Slide
Slide
previous arrow
next arrow

ಅಬ್ಬರದ ಮಳೆ ನಡುವೆ ಭಾವೈಕ್ಯತೆಯ ಮೊಹರಂ ಆಚರಣೆ

300x250 AD

ದಾಂಡೇಲಿ :ಪವಿತ್ರ ಮೊಹರಂ ಹಬ್ಬದ ಕಡೆಯ ದಿನವನ್ನು ಹಿಂದೂ-ಮುಸ್ಲಿಂ ಬಾಂಧವರು ನಗರದಲ್ಲಿ ಬುಧವಾರ ಆಚರಿಸಿದರು.

ನಗರದ ವಿವಿಧ ಬೀದಿಗಳಲ್ಲಿ ಬೆಳಿಗ್ಗೆಯಿಂದಲೇ ನಡೆದ ದೇವರುಗಳ (ಪಂಜಾ) ಮೆರವಣಿಗೆ ಅಬ್ಬರದ ಮಳೆಯ ನಡುವೆಯು ಗಮನ ಸೆಳೆಯಿತು. ಸಾರ್ವಜನಿಕರು ಪಂಜಾ ದೇವರುಗಳ ದರ್ಶನ ಪಡೆದರು. ಐದು ದಿನಗಳ ಕಾಲ ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಪಂಜಾ ದೇವರುಗಳನ್ನು ಬುಧವಾರ ರಾತ್ರಿಯೇ ವಿಸರ್ಜಿಸಲಾಯಿತು.

300x250 AD

ಈ ಮೊಹರಂ ಅನ್ನು ಮುಹರ್ರಂ-ಉಲ್-ಹರಾಮ್ ಎಂದೂ ಸಹ ಕರೆಯುತ್ತಾರೆ. ಹಿಜ್ರಿ ಕ್ಯಾಲೆಂಡರ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ ಹೊಸ ವರ್ಷದ ಆರಂಭವನ್ನು ಸೂಚಿಸುವ ಮೊದಲ ತಿಂಗಳು ಇದು. ರಂಜಾನ್ ನಂತರ ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಇದು ಎರಡನೇ ಪವಿತ್ರ ತಿಂಗಳು ಎಂದು ಪರಿಗಣಿಸಲಾಗಿದೆ. ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಹಜರತ್ ಇಮಾಮ್ ಹುಸೇನ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸುವ ತಿಂಗಳು ಅಂತ ಹೇಳಲಾಗುತ್ತದೆ.

Share This
300x250 AD
300x250 AD
300x250 AD
Back to top