Slide
Slide
Slide
previous arrow
next arrow

ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷರಾಗಿ ಶಂಭು ಬೈಲಾರ ಅವಿರೋಧ ಆಯ್ಕೆ

300x250 AD

ಹೊನ್ನಾವರ: ತಾಲೂಕಿನ ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷರಾಗಿ ಶಂಭು ಬೈಲಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶಂಭು ಬೈಲಾರ್ ಮಾತನಾಡಿ, ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ನಿರ್ದೇಶಕರಿಗೂ ಧನ್ಯವಾದ ಸಮರ್ಪಿಸಿ, ಸಂಸ್ಥೆಯ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.

ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ವಿವಿಧ ಸಂಘಟನೆಯ ನೇತೃತ್ವ ವಹಿಸಿ ಯಶ್ವಸಿಯಾಗಿ ಮುನ್ನಡೆಸಿರುವ ಶಂಭು ಬೈಲಾರ್ ರವರು ಮಾರ್ಕೆಟಿಂಗ್ ಸೊಸೈಟಿ ಬಲವರ್ಧನೆಗೊಳಿಸುವ ವಿಶ್ವಾಸವಿದೆ. ಅವರ ಕಾರ್ಯಕ್ಕೆ ನಮ್ಮೆಲ್ಲರ ಸಹಕಾರ ನೀಡುವುದಾಗಿ ತಿಳಿಸಿದರು.

300x250 AD

ಸಂಸ್ಥೆಯ ಮಾಜಿ ಉಪಾಧ್ಯಕ್ಷ ಶಂಭು ಹೆಗಡೆ ಸಂತಾನ್, ಮಾತನಾಡಿ ಶಂಭು ಬೈಲಾರ ಅವಧಿಯಲ್ಲಿ ಈ ಸಂಸ್ಥೆ ಇನ್ನೂ ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಎಂ.ಆರ್ ಹೆಗಡೆ, ನಾರಾಯಣ ಯಾಜಿ, ಸುಬ್ರಮಣ್ಯ ಹೆಗಡೆ, ನಾರಾಯಣ ಹೆಗಡೆ, ರಾಜು ನಾಯ್ಕ ಮಂಕಿ, ವಿಶ್ವನಾಥ ಹೆಗಡೆ, ಗಣಪಯ್ಯ ಶೆಟ್ಟಿ ಮತ್ತಿತರು ಇದ್ದರು. ನೂತನ ಅಧ್ಯಕ್ಷರಿಗೆ ಶ್ರೀಕುಮಾರ್ ಸಂಸ್ಥೆಯ ವೆಂಕಟರಮಣ ಹೆಗಡೆ ಅಭಿನಂದನೆ ಸಲ್ಲಿಸಿದ್ದಾರೆ.

Share This
300x250 AD
300x250 AD
300x250 AD
Back to top