ದಾಂಡೇಲಿ : ಪಟೇಲ್ ನಗರದಲ್ಲಿರುವ ಹಿಂದೂ ರುದ್ರಭೂಮಿಯ ಮೇಲ್ಛಾವಣಿ ಕುಸಿಯುವ ಹಂತದಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಬೀಳುವ ಸಾಧ್ಯತೆಯಿದೆ.
ಕಳೆದ ಅನೇಕ ವರ್ಷಗಳಿಂದಿರುವ ಈ ರುದ್ರಭೂಮಿ ನಗರದ ಪ್ರಮುಖ ರುದ್ರಭೂಮಿಯಾಗಿದ್ದು, ನಗರಸಭೆಯ ಅಧೀನದಲ್ಲಿದೆ. ಮೇಲ್ಛಾವಣಿಯ ಶೀಟುಗಳು ಒಡೆದು ಹೋಗಿದ್ದರೇ, ಕೆಲವು ಶೀಟುಗಳು ಸ್ಥಾನಪಲ್ಲಟಗೊಂಡಿದೆ. ಇನ್ನೂ ಮೇಲ್ಛಾವಣಿಗೆ ಸಂಬಂಧಿಸಿದ ಕಬ್ಬಿಣದ ರಾಡುಗಳು ಮುರಿದು ಬಿದ್ದಿವೆ. ಕೂಡಲೇ ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಲ್ಲಿ ಮಾತ್ರ ಕುಸಿಯಬಹುದಾದ ಮೇಲ್ಛಾವಣಿಯನ್ನು ಉಳಿಸಲು ಸಾಧ್ಯವಿದೆ. ಇಲ್ಲದೇ ಹೋದಲ್ಲಿ ಮೇಲ್ಛಾವಣಿಯ ಜೊತೆ ಜೊತೆಯಲ್ಲಿ ರುದ್ರಭೂಮಿ ಕಟ್ಟಡವು ಕುಸಿದು ಬಿದ್ದರೂ ಅಚ್ಚರಿಯಿಲ್ಲ.