ಶಿರಸಿ: ಸಮುತ್ಕರ್ಷ- ಐ.ಎ.ಎಸ್ ಶ್ರದ್ಧಾ-ಮೇಧಾ ಪ್ರವೇಶ ಪರೀಕ್ಷೆಯನ್ನು ಜು.14, ರವಿವಾರದಂದು ಬೆಳಿಗ್ಗೆ 10 ರಿಂದ 12 ರವರೆಗೆ, ನಗರದ ಎಮ್.ಇ.ಎಸ್ ವಾಣಿಜ್ಯ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ ಎಂದು ಸಮುತ್ಕರ್ಷ ಟ್ರಸ್ಟ್‌ನ ಡೈರೆಕ್ಟರ ಜನರಲ್ ಜಿತೇಂದ್ರ ನಾಯಕ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಮುತ್ಕರ್ಷ ಐಎಎಸ್ ಸಂಸ್ಥೆಯು ಕರ್ನಾಟಕದಲ್ಲಿ ಕಳೆದ ಎಂಟು ವರ್ಷಗಳಿಂದ ಶಾಲಾ ಮಕ್ಕಳಲ್ಲಿ ಐಎಎಸ್/ ಐಪಿಎಸ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮತ್ತು ಈಗಿನಿಂದಲೇ ತಯಾರಿ ಮಾಡಲು ಅನೇಕ ಕೋರ್ಸ್‌ಗಳನ್ನು ನಡೆಸುತ್ತಿದೆ.
ಈ ಹಿನ್ನೆಲೆಯಲ್ಲಿ ಶಿರಸಿಯಲ್ಲಿ ಶಾಲಾಮಕ್ಕಳಿಗಾಗಿ ‘ಶ್ರದ್ಧಾ” ಮತ್ತು ‘ಮೇಧಾ” ಹೆಸರಿನ IAS foundation ಕೋರ್ಸುಗಳನ್ನು ಪ್ರಾರಂಭಿಸಲಾಗುತ್ತಿದ್ದು, ಈ ಮೂಲಕ 6, 7, 8 ಹಾಗೂ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ನಾಗರಿಕ ಸೇವಾ ಪರೀಕ್ಷೆಗಳಿಗೆ ಅಗತ್ಯವಿರುವ ಮಾನಸಿಕ, ಬೌದ್ಧಿಕ ಸಾಮರ್ಥ್ಯಗಳ ಬೆಳವಣಿಗೆ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳ ಮೂಲಕ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಉನ್ನತ ಕನಸು ಕಾಣುವತ್ತ ಅಡಿಪಾಯ ಹಾಕುವ ಉದ್ದೇಶ ಈ ಕೋರ್ಸಿನದ್ದಾಗಿದೆ. ಆದ್ದರಿಂದ ಆಸಕ್ತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಮೂಲಕ ಕೋರ್ಸ್‌ಗೆ ಪ್ರವೇಶ ಪಡೆಯಬಹುದು ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಪವನ ಹೆಗಡೆ Tel:+918310786962 ಅವರನ್ನು ಸಂಪರ್ಕಿಸಲು ಕೋರಲಾಗಿದೆ.