Slide
Slide
Slide
previous arrow
next arrow

ಆಡುಭಾಷೆಯಿಂದ ಉದ್ಭವಿಸಿದ ಸಾಹಿತ್ಯ ಅಜರಾಮರ: ಎಸ್.ಎಸ್.ಭಟ್

300x250 AD

ಶಿರಸಿ: ಆಡುಭಾಷೆಯಿಂದ ಉದ್ಭವಿಸಿದ ಸಾಹಿತ್ಯ ಅಜರಾಮರವಾಗಿರುತ್ತದೆ. ಜನಮಾನಸದಿಂದ  ಮರೆಯಾಗುತ್ತಿರುವ ಆಡುಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಕರ ಆದ್ಯ ಕರ್ತವ್ಯಗಳಲ್ಲೊಂದು  ಪ್ರಾದೇಶಿಕ ಸೊಗಡಿನ ತಾಯಿಯ ಬಾಯ್ನುಡಿಗಳು ನಮ್ಮ ಪರಂಪರಾಗತ ಜನಪದ ಭಾಷೆಯ ಸೊಗಡಿನ ಸ್ವಾದಿಷ್ಟ ಅನುಭವ ಅದ್ಭುತವಾಗಿರುತ್ತದೆ. ಮಾತೃ ಭಾಷೆಗಿಂತ ಶ್ರೇಷ್ಠ  ಭಾಷೆ ಮತ್ತೊಂದಿಲ್ಲ ಎಂದು ಸಾಹಿತ್ಯ ಚಿಂತಕರ ಚಾವಡಿಯ ಸಂಸ್ಥಾಪಕರಾದ ಎಸ್.ಎಸ್.ಭಟ್ ಹೇಳಿದರು.

ಅವರು ಶಿರಸಿಯ ಸಾಹಿತ್ಯ ಚಿಂತಕರ ಚಾವಡಿಯ ಆಶ್ರಯದಿ ನೆಮ್ಮದಿ ಕುಟೀರದಲ್ಲಿ ನಡೆದ  “ಆಡುಭಾಷಾ ಕವಿಗೋಷ್ಠಿ” ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಂತ್ರಜ್ಞಾನವು ಉತ್ತುಂಗ ಸ್ಥಿತಿಯಲ್ಲಿರುವ ಈ ಕಾಲಘಟ್ಟದಲ್ಲಿ  ಆಡುಭಾಷೆ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಲಿದೆ.  ಜನರು ಮನುಷ್ಯ ತನ್ನ ಜೀವನದಲ್ಲಿ ಅದೆಷ್ಟೇ ಭಾಷೆಗಳನ್ನು ಕಲಿತರೂ ಮಾತೃಭಾಷೆ ಮರೆಯಬಾರದು ಎಂದು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ದಾಕ್ಷಾಯಿಣಿ ಪಿ.ಸಿ. ಹೇಳಿದರು.

ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಎಮ್.ಎಸ್. ಹೆಗಡೆ ಮತ್ತು ಚುಟುಕು ಕವಿ ದತ್ತಗುರು ಕಂಠಿ  ಉಪಸ್ಥಿತರಿದ್ದರು. ಮುಂಗಾರು ನೈಋತ್ಯದಿಂದ ಆರಂಭಿಸಿ ದೇಶಾದ್ಯಂತ ಮಳೆ ಸುರಿಸಿ ವಾಪಸ್ ಹಿಂಗಾರು ಮಳೆಯಾಗಿ ಪುನಃ ಭೂಮಿಯನ್ನು ನೆನೆಸುತ್ತದೆ. ಮಳೆ ಸರಿಯಾಗಿ ಬೀಳದಿದ್ದಲ್ಲಿ ಭಾರತದ ಆರ್ಥಿಕ ಸ್ಥಿತಿ ಡೋಲಾಯಮಾನವಾಗುವ ಸಂದರ್ಭ ಉದ್ಭವಿಸುತ್ತದೆ. ಅದೇ ರೀತಿ ಬರಹಗಾರರಲ್ಲಿ ಉದ್ಭವಿಸುವ ಸಾಹಿತ್ಯ ಶಕ್ತಿಯುತವಾಗಿದ್ದಲ್ಲಿ ಎಲ್ಲ ಕಡೆ ಪ್ರಭಾವ ಬೀರಿ, ಬಳಿಕ ಪ್ರಶಸ್ತಿ, ಗೌರವಾದರ ರೂಪದಲ್ಲಿ ಪುನಃ ಬರಹಗಾರನಲ್ಲಿಗೇ ಬರಲಿದೆ, ಎಂದು ಜಗದೀಶ ಭಂಡಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಆಡುಭಾಷಾ ಕವಿಗೋಷ್ಠಿಯಲ್ಲಿ  ಪ್ರಥಮ ಬಹುಮಾನವನ್ನು ರಮೇಶ ಹೆಗಡೆ ಕೆರೆಕೋಣ,, ದ್ವಿತೀಯ  ಬಹುಮಾನವನ್ನು ದಿನೇಶ ಅಮ್ಮಿನಳ್ಳಿ , ತೃತೀಯ  ಬಹುಮಾನವನ್ನು ಪೂರ್ಣಿಮಾ ಹೆಗಡೆ  ಪಡೆದುಕೊಂಡರು. ಶೋಭಾ ಭಟ್ ಮತ್ತು  ರೋಹಿಣಿ ಹೆಗಡೆ ನಿರ್ಣಾಯಕರಾಗಿದ್ದರು. ಉಳಿದಂತೆ  ದಿನೇಶ ಭಾಗ್ವತ್,  ಡಿ.ಎಂ.ಭಟ್, ಶಂಕರ ಹೊನ್ನೇಕೊಪ್ಪ, ಭಾರತಿ ಹೆಗಡೆ, ಯಶಸ್ವಿನಿಮೂರ್ತಿ,  ಉಮೇಶ ದೈವಜ್ಞ  ಜಗದೀಶ ಭಂಡಾರಿ, ಎಸ್ ಎಸ್ ಭಟ್, ವಾಸಿದೇವ ಶಾನಭಾಗ,  ಲಲಿತಾ ಭಟ್, ನೇತ್ರಾವತಿ ಕೆಂಚಗದ್ದೆ, ರೇಣುಕಾ ಬ್ಯಾಗದ್ದೆ, ಎಸ್ ಎಮ್ ಹೆಗಡೆ, ಚೇತನಾ ಹೆಗಡೆ,  ಪ್ರಥಮ್, ಸೋಮಶೇಖರ, ಬಿಂದು, ಅನು, ವಿವೇಕಾನಂದ, ಜಲಜಾಕ್ಷಿ ಶೆಟ್ಟಿ, ಯಮುನಾ ಹೆಗಡೆ ಇವರು ತಮ್ಮ ಆಡುಭಾಷೆಯಲ್ಲಿಯೇ ಕವಿತೆ ವಾಚಿಸಿದರು. ವಾಚಿಸಿದ ಕವಿಗಳಿಗೆಲ್ಲಾ ಅಭಿನಂದನಾ ಪತ್ರ ನೀಡಲಾಯಿತು.

300x250 AD

    ಶ್ರೀರಾಮ ಪೈ  ಮತ್ತು ನಿರ್ಣಾಯಕರಾಗಿ ಆಗಮಿಸಿದ ರೋಹಿಣಿ ಹೆಗಡೆ, ಶೋಭಾ ಭಟ್ ಅನಿಸಿಕೆ  ವ್ಯಕ್ತಪಡಿಸಿದರು.  ಕಥೆಗಾರ ಕೆ.ಮಹೇಶ ಸರ್ವರನ್ನೂ ಸ್ವಾಗತಿಸಿದರು. ರೇಣುಕಾ ಬ್ಯಾಗದ್ದೆ ಪ್ರಾರ್ಥಿಸಿದರು. ಕವಯತ್ರಿ ಯಶಸ್ವಿನಿಮೂರ್ತಿ ನಿರ್ವಹಿಸಿದರು. ಕೊನೆಯಲ್ಲಿ  ಎಸ್.ಎಮ್. ಹೆಗಡೆ  ವಂದಿಸಿದರು.

Share This
300x250 AD
300x250 AD
300x250 AD
Back to top