Slide
Slide
Slide
previous arrow
next arrow

ಅಮೇರಿಕಾದಲ್ಲಿ ಅಪ್ರತಿಮ ಸಾಧನೆಗೈದ ಶಿರಸಿಯ ಮಧುರಾ ಭಟ್

300x250 AD

ತನ್ನ ಮೊದಲ ಪ್ರಯತ್ನದಲ್ಲಿಯೇ ನ್ಯೂಯಾರ್ಕ್ ಸ್ಟೇಟ್‌ನ ಉಚ್ಚನ್ಯಾಯಾಲಯದಲ್ಲಿ ಕಾನೂನು ಸಲಹೆಗಾರಳಾಗಿ (Attorney and Counselor at Low) ಪ್ರಾಕ್ಟಿಸ್ ಮಾಡಲು ಪರವಾನಗಿ ಪಡೆಯಲು ಯಶಸ್ವಿಯಾಗಿದ್ದಾಳೆ. ಅಮೇರಿಕಾದ ನ್ಯೂಯಾರ್ಕ ಸ್ಟೇಟ್‌ನ ಉಚ್ಚನ್ಯಾಯಾಲಯವು ಮಧುರಾಳಿಗೆ ಲೈಸೆನ್ಸ್ ನೀಡಿ ಗೌರವಿಸಿದೆ.

ಶಿರಸಿ ತಾಲ್ಲೂಕಿನ ಸಾಲ್ಕಣಿ ಗ್ರಾಮದ ಮುದ್ದಿನಪಾಲಿನ ಮಧುರಾ ಭಟ್ ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತುಮಕೂರಿನಲ್ಲಿ ಮುಗಿಸಿ ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಬಿ.ಎ, ಎಲ್.ಎಲ್.ಬಿ ಲ. ಪದವಿ ಪಡೆದು ದೆಹಲಿಯಲ್ಲಿ ತೆರಿಗೆ ಕಾನೂನಿನ ಕುರಿತು ಹೆಚ್ಚಿನ ಅಧ್ಯಯನ ನಡೆಸಿ ಅಮೇರಿಕಾದ ನ್ಯೂಯಾರ್ಕ್ ಯೂನಿವರ್ಸಿಟಿಯಲ್ಲಿ ಅಂತರಾಷ್ಟ್ರೀಯ ತೆರಿಗೆ ಕಾನೂನು (International Taxation Law) ಕುರಿತು LLM ಪದವಿ ಪಡೆದಿರುತ್ತಾಳೆ. ಅಂತರಾಷ್ಟ್ರೀಯ ಮನ್ನಣೆಯ International Monitory Fund ನಲ್ಲಿ 2 ತಿಂಗಳ Internship ಮುಗಿಸಿ ಪ್ರಸ್ತುತ ಪ್ರತಿಷ್ಠಿತ ಮೇ॥ ಪೌಲ್ ವೇಸ್ಸಿಸ್ ಕಾನೂನು ಸಂಸ್ಥೆಯಲ್ಲಿ ಅಸೋಸಿಯೇಟ್ ಆಗಿ ಕೆಲಸ ನಿರ್ವಹಿಸಿದ್ದು, ಇವರ ಸಾಧನೆಗೆ ದೆಹಲಿಯ ಹಾಗೂ ಬೆಂಗಳೂರಿನ ಹಿರಿಯ ವಕೀಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಕೆಯ ತಂದೆ ತುಮಕೂರು ಹಾಲು ಒಕ್ಕೂಟ (ಕೆ.ಎಂ.ಎಫ್)ದ ವ್ಯವಸ್ಥಾಪಕ ನಿರ್ದೇಶಕರಾಗಿ ನಿವೃತ್ತರಾಗಿರುವ ಡಾ॥ ಸುಬ್ರಾಯ ಭಟ್ ಮುದ್ದಿನಪಾಲು ಹಾಗೂ ತಾಯಿ ಹೋಮಿಯೋಪಥಿಕ್ ವೈದ್ಯೆ ಡಾ॥ ಜಯಲಕ್ಷ್ಮೀ ಶಿರಸಿಯವರು ಎನ್ನುವುದು ಗಮನಾರ್ಹ.

300x250 AD

ಅಂದಹಾಗೆ ಮಧುರಾ ಯಲ್ಲಾಪುರದ ಖ್ಯಾತ ಹಿರಿಯ ವಕೀಲರಾದ ವಿ.ಪಿ.ಭಟ್ ಕಣ್ಣಿ ಇವರ ಮೊಮ್ಮಗಳು.

Share This
300x250 AD
300x250 AD
300x250 AD
Back to top