ಶಿರಸಿ: ಶಿರಸಿ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಇತ್ತಿಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ನಿಯಂತ್ರಿಸುವ ಸಲುವಾಗಿ ಶುಕ್ರವಾರ ಸಾಯಂಕಾಲ ಶಿರಸಿ ನಗರ ಠಾಣೆಯ ಪೊಲೀಸರು ನಿಲೇಕಣಿ ನಾಕಾದಲ್ಲಿ ವಿಶೇಷ ಸಂಚಾರ ಡ್ರೈವ್ ಕಾರ್ಯಾಚರಣೆ ಹಮ್ಮಿಕೊಂಡು ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ದ ಭಾರತೀಯ ಮೊಟಾರು ವಾಹನ ಕಾಯ್ದೆಯಡಿಯಲ್ಲಿ ಒಟ್ಟು 54 ಪ್ರಕರಣಗಳನ್ನು ದಾಖಲಿಸಿ 28,500 ರೂ. ದಂಡ ವಿಧಿಸಿದ್ದಾರೆ.
ದೋಷಪೂರಿತ ಎಲ್ಇಡಿ ಲೈಟ್ ಬಳಕೆ: ಮುಂದುವರೆದ ಕಾರ್ಯಾಚರಣೆ:
ವಾಹನಗಳಿಗೆ ಹೆಚ್ಚಿನ ಪ್ರಖರತೆವುಳ್ಳ ಎಲ್ಇಡಿ ಲೈಟ್ ಗಳನ್ನು ಅಳವಡಿಸಿಕೊಂಡು ವಾಹನ ಚಲಾಯಿಸುವ ಸವಾರರ ಮೇಲೆ ಕಾರ್ಯಾಚರಣೆ ಮುಂದುವರೆಸಿ ಐಎಂವಿ ಕಾಯ್ದೆಯಡಿ ಒಟ್ಟು 23 ಪ್ರಕರಣ ದಾಖಲಿಸಿ 13,000/- ರೂ. ದಂಡ ವಿಧಿಸಿದ್ದಾರೆ
ಶಿರಸಿ ಉಪ ವಿಭಾಗದ ಡಿಎಸ್ಪಿ ಗಣೇಶ ಕೆಎಲ್,ಶಿರಸಿ ವೃತ್ತ ನಿರೀಕ್ಷಕ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ಶಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ.ನೇತೃತ್ವದಲ್ಲಿ ಎಎಸ್ಐಗಳಾದ ಹೊನ್ನಪ್ಪ ಅಗೇರ,ನೆಲ್ಸನ್ ಮೆಂಥಾರೋ,ಸಿಬ್ಬಂದಿಗಳಾದ ಹನುಮಂತ ಕಬಾಡಿ,ಮಂಜುನಾಥ ಕಾಶಿಕೊವಿ, ಚನ್ನಬಸಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.