Slide
Slide
Slide
previous arrow
next arrow

ಕಾರ್ಯಕರ್ತರ ಪರಿಶ್ರಮ ಐತಿಹಾಸಿಕ ಗೆಲುವಿಗೆ ಮುನ್ನುಡಿ; ಸಂಸದ ಕಾಗೇರಿ

300x250 AD

ಬನವಾಸಿ: ಜಿಲ್ಲೆಯ ಜನತೆಗೆ ವ್ಯಕ್ತಿ ಮುಖ್ಯವಲ್ಲ. ದೇಶದ ಅಭಿವೃದ್ಧಿ ಮುಖ್ಯ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿ ಹಾಗೂ ಕಾರ್ಯಕರ್ತರ ಕ್ಷೇತ್ರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಉತ್ತರ ಕನ್ನಡ ಲೋಕಸಭಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಇಲ್ಲಿಯ ನಾಮದೇವ ಕಲ್ಯಾಣ ಮಂಟಪದಲ್ಲಿ ಬುಧವಾರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಪಕ್ಷದ ಕಾರ್ಯಕರ್ತರಿಗಾಗಿ ಏರ್ಪಡಿಸಿದ್ದ “ಕೃತಜ್ಞತಾ ಸಮಾರಂಭ” ದಲ್ಲಿ ಪಾಲ್ಗೊಂಡು ಮಾತನಾಡಿದರು.

ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮೂರುವರೆ ಲಕ್ಷ ಅಧಿಕ ಮತಗಳ ಅಂತರದಿಂದ ಚುನಾಯಿತನಾಗಲು ಪಕ್ಷದ ಎಲ್ಲಾ ಕಾರ್ಯಕರ್ತರ ಪರಿಶ್ರಮ ಊಹೆಗೂ ನಿಲುಕದ್ದು ಎಂದು ಭಾವಿಸಿದ್ದೇನೆ. ಚುನಾವಣೆಗೂ ಮುನ್ನ ಐತಿಹಾಸಿಕ ಶ್ರೀ ಮಧುಕೇಶ್ವರನ ಆಶೀರ್ವಾದ ಪಡೆದು ಚುನಾವಣೆಯ ಪ್ರಕ್ರಿಯೆ ಆರಂಭಿಸಿದ್ದೆವೆ. ಇಂದು ಶ್ರೀ ಮಧುಕೇಶ್ವರ ದೇವರ ಆಶೀರ್ವಾದ, ನಿಮ್ಮೆಲ್ಲರ ಸಹಕಾರದಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದೆನೆ. ನನ್ನ ಮೇಲೆ ನೀವು ಇಟ್ಟಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಸದಾ ಆಭಾರಿಯಾಗಿದ್ದೇನೆ. ಬನವಾಸಿ ಅಭಿವೃದ್ಧಿ ಕಾರ್ಯ ಬಹಳಷ್ಟು ಬಾಕಿ ಉಳಿದಿದ್ದು ಪುರಾತತ್ವ ಇಲಾಖೆಯು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವುದರಿಂದ ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರದೊಂದಿಗೆ ಬನವಾಸಿ ಹಾಗೂ ಗುಡ್ನಾಪೂರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರ ಅನೇಕ ಜನಪರ ಯೋಜನೆಗಳ ಮೇಲೆ ನಂಬಿಕೆ ಇಟ್ಟು ಮತ ನೀಡಿದ ಕ್ಷೇತ್ರದ ಮತದಾರ ಬಾಂಧವರಿಗೆ ಈ ವೇದಿಕೆಯ ಮೂಲಕ ಕೃತಜ್ಞತೆ ಸಲ್ಲಿಸಲು ನಾನು ಉತ್ಸುಕನಾಗಿದ್ದೇನೆ. ನನ್ನ ಮೇಲೆ ಇಟ್ಟಿರುವ ಈ ನಂಬಿಕೆಯನ್ನು ಉಳಿಸಿಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ಮುಂದುವರಿಸುತ್ತೇನೆ. ಮುಖ್ಯವಾಗಿ ಈ ಕ್ಷೇತ್ರದ ಶಾಸಕರು ನಮ್ಮವರಾಗಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮೋಸ ಮಾಡುವವರಿಗೆ ಕಾಲವೇ ತಕ್ಕ ಪಾಠ ಕಲಿಸುತ್ತದೆ. ಯಲ್ಲಾಪುರ ಕ್ಷೇತ್ರದ ಪ್ರಬುದ್ಧ ಜನತೆ ಎಲ್ಲ ಮಂಡಲಗಳಲ್ಲಿ ಬಿಜೆಪಿಗೆ ಹೆಚ್ಚು ಮತಗಳನ್ನು ನೀಡುವ ಮೂಲಕ ಮೋಸಗಾರರಿಗೆ ತಕ್ಕ ಪಾಠ ಕಲಿಸಿದ್ದಾರೆ. ಶಾಸಕರು ಬಿಜೆಪಿ ತತ್ವ ಸಿದ್ದಾಂತಕ್ಕೆ ಒಪ್ಪಿಕೊಳ್ಳದೇ ಇದ್ದರೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಲು ಮುಂದಾಗಲಿ ಎಂದು ನಮ್ಮ ಕಾರ್ಯಕರ್ತರು ಸವಾಲು ಹಾಕುತ್ತಿರುವುದನ್ನು ಕಂಡರೆ ಮುಂದಿನ ದಿನಗಳಲ್ಲಿ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

300x250 AD

ಈ ಸಂದರ್ಭದಲ್ಲಿ ಬಿಜೆಪಿಯ ಗ್ರಾಮೀಣ ಮಂಡಲದ ಪ್ರಮುಖರು, ಮುಖಂಡರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top