ಸಿದ್ದಾಪುರ: ತಾಲೂಕಿನ ಬೆಳಸಲಿಗೆ ಯಕ್ಷಕಲಾ ಪ್ರತಿಷ್ಠಾನ ಇವರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಸಹಕಾರದೊಂದಿಗೆ ಕವಲಕೊಪ್ಪದ ಸಿದ್ಧಿವಿನಾಯಕ ದೇವಾಲಯದ ಸಭಾಂಗಣದಲ್ಲಿ ಮುಂಗಾರು ಯಕ್ಷಸಂಭ್ರಮ ಜೂ.11ರಿಂದ 13ರವರೆಗೆ ಮೂರು ದಿನಗಳ ಕಾಲ ಜರುಗಲಿದೆ.
ಜೂ.11ರಂದು ಸಂಜೆ 6ಕ್ಕೆ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಾರ್ಸಿಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಹಾಬಲೇಶ್ವರ ಭಟ್ಟ ಅಗ್ಗೇರೆ ಅಧ್ಯಕ್ಷತೆವಹಿಸುವರು. ಜಿ.ಜಿ.ಹೆಗಡೆ ಬಾಳಗೋಡ, ಎನ್.ವಿ.ಹೆಗಡೆ ಮುತ್ತಿಗೆ, ಗ್ರಾಪಂ ಅಧ್ಯಕ್ಷೆ ಶಾಮಲಾ ಗೌಡ, ಸದಸ್ಯ ಬಾಬು ನಾಯ್ಕ ಮುತ್ತಿಗೆ ಉಪಸ್ಥಿತರಿರುತ್ತಾರೆ. ನಂತರ ನಡೆಯುವ ಹಿಮ್ಮೇಳ ವೈಭವದಲ್ಲಿ ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ಸತೀಶ ಹೆಗಡೆ ದಂಟಕಲ್, ಮಾಧವ ಭಟ್ಟ ಕೊಳಗಿ, ಗಿರೀಶ ಹೆಗಡೆ ಗೊದ್ಲಬೀಳು, ಮದ್ದಳೆಯಲ್ಲಿ ಶರತ್ ಹೆಗಡೆ ಜಾನಕೈ, ಮಂಜುನಾಥ ಹೆಗಡೆ ಗುಡ್ಡೆದಿಂಬ, ಚಂಡೆಯಲ್ಲಿ ಕು.ಶ್ರೀರಮಣ ಭಟ್ಟ ಮುರೂರು, ಕು.ಶ್ರೀವತ್ಸ ಹೆಗಡೆ ಗುಡ್ಡೆದಿಂಬ ಪಾಲ್ಗೊಳ್ಳಲಿದ್ದಾರೆ.
ಜೂ.12ರಂದು ಸಂಜೆ 7ರಿಂದ ಉತ್ತರಗೋಗ್ರಹಣ ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕ ಭಾಗ್ವತ್, ರಾಕೇಶ ಮಲ್ಯ ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ಡಾ.ಪ್ರದೀಪ ಸಾಮಗ, ಡಾ.ವೈಕುಂಠ ಹೇರಳೆ, ಅಶೋಕ ಭಟ್ಟ ಸಿದ್ದಾಪುರ, ಷಣ್ಮುಖ ಗೌಡ, ವೆಂಕಟೇಶ ಬಗ್ರಿಮಕ್ಕಿ, ಅವಿನಾಶ ಕೊಪ್ಪ ಪಾತ್ರ ನಿರ್ವಹಿಸಲಿದ್ದಾರೆ.
ಜೂ.13ರಂದು ಸಂಜೆ 6ಕ್ಕೆ ಸಮಾರೋಪ ಜರುಗಲಿದ್ದು ಜ.ಕೆ.ಭಟ್ಟ ಕಶಿಗೆ ಸಮಾರೋಪ ಮಾತನಾಡಲಿದ್ದಾರೆ. ಡಾ.ಶಶಿಭೂಷಣ ಹೆಗಡೆ ದೊಡ್ಮನೆ ಅಧ್ಯಕ್ಷತೆ ವಹಿಸಲಿದ್ದಾರೆ.ಟಿಎಸ್‌ಎಸ್ ನಿರ್ದೇಶಕ ರವೀಂದ್ರನಾಥ್ ಹೆಗಡೆ ಹಿರೇಕೈ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ, ಎಂ.ಎಸ್.ಹೆಗಡೆ ಕವಲಕೊಪ್ಪ ಉಪಸ್ಥಿತರಿರುತ್ತಾರೆ.
ನಂತರ ಬ್ರಹ್ಮಕಪಾಲ ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಸತೀಶ ಹೆಗಡೆ ದಂಟಕಲ್, ಶಂಕರ ಭಾಗ್ವತ್, ಸಂಪ ಲಕ್ಷ್ಮಿನಾರಾಯಣ ಸಹಕರಿಸುವರು. ಮುಮ್ಮೇಳದಲ್ಲಿ ರಾಮಚಂದ್ರ ಹೆಗಡೆ ಕೊಂಡದಕುಳಿ, ಗಣಪತಿ ಹೆಗಡೆ ತೋಟಿಮನೆ, ಶಂಕರ ಹೆಗಡೆ ನೀಲಕೋಡು, ಅಶೋಕ ಭಟ್ಟ ಸಿದ್ದಾಪುರ, ಷಣ್ಮುಖ ಗೌಡ, ಶ್ರೀಧರ ಹೆಗಡೆ ಚಪ್ಪರಮನೆ, ನಿರಂಜನ ಜಾಗನಳ್ಳಿ, ವೆಂಕಟೇಶ ಬಗ್ರಿಮಕ್ಕಿ, ಅವಿನಾಶ ಕೊಪ್ಪ, ನಿತಿನ್ ದಂಟಕಲ್ ಪಾತ್ರನಿರ್ವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.