ಕೊಂಕಣ ಸರಸ್ವತಿ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಆರಂಭೋತ್ಸವ
ಕುಮಟಾ: ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಬಿ.ಕೆ. ಭಂಡಾರಕರ್ಸ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನು ಸ್ವಾಗತಿಸುವ “ಆರೋಂಭೋತ್ಸವ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಎಸ್‌ಡಿಎಂ ವಾಣಿಜ್ಯ ಮಹಾವಿದ್ಯಾಲಯ ಹೊನ್ನಾವರದ ನಿವೃತ್ತ ಉಪನ್ಯಾಸಕರಾದ ವಿ.ಎನ್. ಭಂಡಾರಿ ಆಗಮಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಾಣಿಜ್ಯ ವಿಭಾಗ ಆಯ್ಕೆ ಮಾಡಿಕೊಂಡ ಬಗ್ಗೆ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪುಸ್ತಕ ಮಸ್ತಕ ಜೊತೆಯಾಗಿರಲಿ, ಕೈಯಲ್ಲಿ ಪುಸ್ತಕ ಮಸ್ತಕ ಹೊರಗಡೆ ಸುತ್ತಿದರೆ ವಿದ್ಯೆ ಹತ್ತುವುದಿಲ್ಲ. ಪ್ರತಿನಿತ್ಯ ಎರಡು ತಾಸು ಅಭ್ಯಾಸ ಅಗತ್ಯ .ಅಬ್ದುಲ್ ಕಲಾಂ ನಮಗೆ ಆದರ್ಶ, ದೇಶದ ಅತ್ಯತ್ತಮ ವಿಜ್ಞಾನಿ,ರಾಷ್ಟ್ರಪತಿ ಎನಿಸಿದ ಅವರು ವಿದ್ಯಾರ್ಥಿ ದಿಸೆಯಲ್ಲಿ ತಿರುಚನಾಪಳ್ಳಿಯಲ್ಲಿ ಪೇಪರ್ ಹಂಚಿ ಕಷ್ಟಪಟ್ಟು ಸಾಧನೆ ಮಾಡಿದ್ದಾರೆ.
ಮಕ್ಕಳು ವಿದ್ಯಾರ್ಥಿ ಇರುವಾಗಲೇ ದುಡಿಯು ಪ್ರವತ್ತಿ ಗಳಿಸಿಕೊಳ್ಳಿ,ಕಲಿಕೆ ಜೊತೆಗೆ ದುಡಿಮೆ ಕಾಮರ್ಸ ಅಭ್ಯಾಸದಲ್ಲಿ ಸಾಧ್ಯ ಎಂದರು. ವಾಣಿಜ್ಯ ವಿಷಯವು ಸದಾ ಚಾಲ್ತಿಯಲ್ಲಿ ಇರುವುದಾಗಿದೆ, ಇದಕ್ಕೆ ಸದಾ ಭವಿಷ್ಯವಿದೆ. ಜಗತ್ತಿನಲ್ಲಿ ಕ್ರಯ ವಿಕ್ರಯ ವ್ಯವಸ್ಥೆ ಇರುವ ತನಕ ಕಾಮರ್ಸ್ ವಿಭಾಗ ಬದುಕಿರುತ್ತದೆ ಎಂದರು. ಭಾರತದಲ್ಲಿ ಕಾಮರ್ಸ್ 1886 ರಲ್ಲಿ ಆರಂಭಗೊಂಡು ದೇಶದ ಹಳ್ಳಿ ಹಳ್ಳಿಗಳಲ್ಲಿ ಇಂದು ಕಾಮರ್ಸ ಕಾಲೇಜುಗಳಿವೆ. ಸರಕು ಮತ್ತು ಸೇವಾ ತೆರಿಗೆಯ ಜಾರಿಯಿಂದ ಕಾಮರ್ಸ್ ಕಲಿತವರಿಗೆ ಉದ್ಯೋಗ ಅವಕಾಶ ವಿಪುಲ ಆಗಿದೆ ಎಂದರು.
ಪಿಯುಸಿ ಕಾಮರ್ಸ್ ಬಳಿಕ ಇರುವ ವಿವಿಧ ಕೋರ್ಸುಗಳ ಹಾಗೂ ಉದ್ಯೋಗ ಅವಕಾಶಗಳ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಕಿರಣ ಭಟ್ಟ ಎಲ್ಲಾ ವಿದ್ಯಾಗಳಿಗೂ ಅಭಿನಂದನೆ ಸಲ್ಲಿಸಿ ಕಾಲೇಜಿನ ನಿಯಮಾವಳಿಗಳನ್ನು ಗೌರವಿಸಿ ಮುಂದೆ ಆದರ್ಶ ನಾಗರೀಕರಾಗಬೇಕೆಂದರು.ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕರಾದ ಗುರುರಾಜ ಶೆಟ್ಟಿಯವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾಲೇಜಿನ ಉಪಪ್ರಾಚಾರ್ಯರಾದ ಸುಜಾತಾ ಹೆಗಡೆ ವಾರ್ಷಿಕ ಕಾರ್ಯ ಯೋಜನೆಯ ಪರಿಚಯ ಮಾಡಿದರು.ಕಾಲೇಜಿನಲ್ಲಿ ಬೋಧಿಸುವ ವಿಷಯಗಳ ಹಾಗೂ ಎಲ್ಲ ಉಪನ್ಯಾಸಕರುಗಳ ಪರಿಚಯ ಮಾಡಿದರು. ಉಪನ್ಯಾಸಕಿ ಗಾಯತ್ರಿ ಕಾಮತ್ ಸರ್ವರನ್ನೂ ಸ್ವಾಗತಿಸಿದರು.ಉಪನ್ಯಾಸಕ ಚಿದಾನಂದ ಭಂಡಾರಿ ವಂದನಾರ್ಪಣೆ ಗೈದರು. ಕುಮಾರಿ ಅನನ್ಯಾ ಹಾಗೂ ಮಾನಸಾ ಭರತನಾಟ್ಯದೊಂದಿಗೆ ಪ್ರಾರ್ಥನೆ ಗೈದರು. ವಿದ್ಯಾರ್ಥಿನಿಯರಾದ ಸಿಂಚನಾ ಹಾಗೂ ರಶ್ಮಿತಾ ಕಾರ್ಯಕ್ರಮ ನಿರೂಪಣೆಗೈದರು.