Slide
Slide
Slide
previous arrow
next arrow

ಕಾರುಗಳ‌ ಮೇಲೆ ಉರುಳಿದ ಮರ : ಕಾರು ಜಖಂ

300x250 AD

ದಾಂಡೇಲಿ: ನಗರದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ನಗರದ ಕೆ.ಸಿ ವೃತ್ತದ ಸಮೀಪದಲ್ಲಿ ಮರವೊಂದು ಧರೆಗುರುಳಿದ ಎರಡು ಕಾರುಗಳ ಮೇಲೆ ಬಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾಗಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಶನಿವಾರ ಮಧ್ಯಾಹ್ನದಿಂದಲೇ ಸ್ಥಳೀಯ ಕೆ.ಸಿ ವೃತ್ತದಲ್ಲಿರುವ ಆಟೋ ಚಾಲಕರು ಯಾವುದೇ ಸಂದರ್ಭದಲ್ಲಿ ಮರ ಬೀಳುವ ಸಾಧ್ಯತೆ ಇರುವ ಬಗ್ಗೆ ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದ್ದರು. ಆದರೆ ಭಾನುವಾರ ಮಧ್ಯಾಹ್ನ ಮರವೊಂದು ಅಲ್ಲೇ ರಸ್ತೆ ಬದಿಯಲ್ಲಿ ನಿಂತಿದ್ದ ಕೆಎ 63 ಎನ್ 1725 ಮತ್ತು ಕೆಎ 25 ಎಂ. ಸಿ 9270 ಸಂಖ್ಯೆಯ ಎರಡು ಕಾರುಗಳ ಮೇಲೆ ಬಿದ್ದು, ಎರಡು ಕಾರುಗಳಿಗೂ ಹಾನಿಯಾಗಿದೆ. ಸ್ಥಳದಲ್ಲಿ ಸ್ಥಳೀಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ಬಿದ್ದ ಮರದ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top