ಸ್ವಸ್ತಿಕ್ ಮೀಡಿಯಾದ ರವೀಶ್ ಹೆಗಡೆ ಸೇರಿ ಮೂವರ ಮೇಲೆ ಕೇಸ್ ದಾಖಲಿಸಿದ ಕೆಡಿಸಿಸಿ ಬ್ಯಾಂಕ್ ಮ್ಯಾನೇಜರ್
ಶಿರಸಿ: ಕಾರು ಖರೀದಿಸುವುದಾಗಿ ನಕಲಿ ದಾಖಲೆಪತ್ರಗಳನ್ನು ಸಲ್ಲಿಸಿ, ಕೆಡಿಸಿಸಿ ಬ್ಯಾಂಕ್ ಗೆ ಮೋಸ ಮಾಡಿದ ಮೂವರ ವಿರುದ್ಧ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಅಜ್ಜಿಬಳ ಸಮೀಪದ ಸೊಂಡ್ಲಬೈಲ್ ನ ರವೀಶ ಹೆಗಡೆ, ವೆಂಕಟ್ರಮಣ ಗಜಾನನ ಹೆಗಡೆ, ನೆಗ್ಗು ಗ್ರಾಪಂ ವ್ಯಾಪ್ತಿಯ ಮಣಿಕಂಠ ಚಂದ್ರಶೇಖರ ನಾಯ್ಕ ಮೇಲೆ ಪ್ರಕರಣ ದಾಖಲಾಗಿದೆ.
ರವೀಶ ಹೆಗಡೆ ಕೆಡಿಸಿಸಿ ಬ್ಯಾಂಕ್ ನಲ್ಲಿ 07-10-2023 ರಂದು ಹುಂಡೈ ಕಂಪೆನಿಯ ಕ್ರೇಟಾ ಕಾರು ಖರೀದಿಸುವುದಾಗಿ ಸಾಲದ ಅರ್ಜಿ ಭರಣ ಮಾಡಿ ಅದಕ್ಕೆ ತಗಲುವ ವೆಚ್ಚ 24,19,449 ರೂ. ಸಾಲ ನೀಡಬೇಕಾಗಿ ಅರ್ಜಿ ಸಲ್ಲಿಸಿದ್ದ. ವೆಂಕಟ್ರಮಣ ಹೆಗಡೆ, ಮಣಿಕಂಠ ನಾಯ್ಕ ಈತನಿಗೆ ಜಾಮೀನುದಾರರಾಗಿದ್ದು, ಕಾಗದಪತ್ರಗಳಿಗೆ ರವೀಶ ಹೆಗಡೆ ಬ್ಯಾಂಕಿನಲ್ಲಿ ಸಾಲದ ಪತ್ರಗಳಿಗೆ ಸಹಿ, ಟ್ಯಾಕ್ಸ್ ಇನ್‌ವಾಯ್ಸ್, ಶಿರಸಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ನೀಡುವ ವಾಹನಗಳ ‘ಬಿ’ ಅಬ್ಟ್ಸಾಕ್ಟ್ ಹಾಗೂ ವಿಮೆ ಮಾಡಿದ ಬಗ್ಗೆ ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಸೂರೆನ್ಸ್ ಕಂಪೆನಿಯ ಪಾಲಿಸಿ ಪತ್ರ ಇತ್ಯಾದಿ ದಾಖಲೆಗಳನ್ನು ಬ್ಯಾಂಕಿನವರಿಗೆ ಒದಗಿಸಿ, ಜಾಮೀನುದಾರರಾದ ವೆಂಕಟರಮಣ ಹೆಗಡೆ ಮತ್ತು ಮಣಿಕಂಠ ನಾಯ್ಕ ಜತೆ ಬಿಳಿ ಬಣ್ಣದ ಹುಂಡೈ ಕ್ರೆಟಾ ಕಾರಿನಲ್ಲಿ ರವೀಶ ಹೆಗಡೆ ಶಾಖೆಗೆ ಬಂದು ಕೆಎ.31 ಪಿ 3219 ನಂಬರಿನ ಕಾರನ್ನು ತೋರಿಸಿ ಸಾಲದ ಶರತ್ತಿನಂತೆ ಚಾವಿಯನ್ನು ನೀಡಿ, ಸಾಲದ ಕಂತನ್ನು ತುಂಬುತ್ತ ಬಂದಿದ್ದಾರೆ. ಶಾಖೆಯ ವ್ಯವಸ್ಥಾಪಕರು ಬೇರೆ ಶಾಖೆಯಲ್ಲಿ ವಾಹನದ ಸಾಲದ ಪ್ರಕರಣ ಒಂದರಲ್ಲಿ ಯಾವುದೇ ವಾಹನವನ್ನು ಖರೀದಿಸದೇ ನಕಲು ದಾಖಲಾತಿಗಳನ್ನು ಸಲ್ಲಿಸಿ ಸಾಲ ಪಡೆದಿರುವ ಬಗ್ಗೆ ಮನಗಂಡು, ಪಡೆದ ವಾಹನ ಸಾಲಗಳ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಹುಬ್ಬಳ್ಳಿಯ ವಿದ್ಯಾನಗರದ ಶಿರೂರು ಪಾರ್ಕ್ ಮೇನ್ ರೋಡ್ ನ ಕೆನರಾ ಮೋಟಾರ್ ಪೈವೇಟ್ ಲಿಮಿಟೆಡ್ ದರಪತ್ರವನ್ನು ಸಲ್ಲಿಸಿ ಸಾಲದ ಮಂಜೂರಿಗೆ ರಿಟರ್ನ್‌ಗಳು, ಆಧಾರ ಬ್ಯಾಂಕಿನವರು 17-10-2021 ರಂದು 19,98,499 ರೂ. ಹಣವನ್ನು ಹುಬ್ಬಳ್ಳಿಯ ಕೆನರಾ ಮೋಟಾರ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಎಕ್ಸಿಸ್ ಬ್ಯಾಂಕಿನ ಖಾತೆ ಸಂಖ್ಯೆಗೆ (923020009621565) ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ರವೀಶ ಹೆಗಡೆ ಕೆನರಾ ಮೋಟಾರ ಖಾತೆಗೆ ಹಣ ಪಾವತಿ ಮಾಡಿದ ಬಗ್ಗೆ ವೋಚರ್, ಕಾರ್ಡ್, ಪಾನ್ ಕಾರ್ಡ್ ಇತ್ಯಾದಿ ದಾಖಲಾತಿಗಳನ್ನು ಸಲ್ಲಿಸಿದಂತೆ ಆರೋಪಿತರು ನೀಡಿದ ಎಲ್ಲ ದಾಖಲೆಗಳು ನಕಲಿಯಾಗಿದ್ದಲ್ಲದೇ, ವಾಹನ ನೊಂದಣಿ ಸಂಖ್ಯೆ ಕೆಎ 31 ಪಿ 3219 ಕೂಡ ಕಾಲ್ಪನಿಕವಾಗಿದೆ. ಶಾಖೆಗೆ ತಂದು ತೋರಿಸಲಾದ ಕಾರು ನಕಲಿ ಮತ್ತು ಅವರು ಕೊಟ್ಟ ಕಾರಿನ ಕೀಲಿಯೂ ನಕಲಿಯಾಗಿರುತ್ತದೆ. ಕೆಡಿಸಿಸಿ ಬ್ಯಾಂಕಿಗೆ ಮೋಸ ಮಾಡುವ ಉದ್ದೇಶದಿಂದ ನಕಲಿ ದಾಖಲಾತಿಗಳನ್ನು ಸೃಷ್ಟಿಮಾಡಿ, ಅವು ನೈಜವೆಂದು ನಂಬಿಸಿ, ಬ್ಯಾಂಕಿಗೆ ಮೋಸ ಮತ್ತು ವಂಚನೆ ಮಾಡಿದ್ದಾರೆ ಎಂದು ನಗರದ ಸಿಪಿ ಬಜಾರ್‌ನ ಕೆಡಿಸಿಸಿ ಬ್ಯಾಂಕ್ ಶಾಖೆಯ ವ್ಯವಸ್ಥಾಪಕಿ ಅನಿತಾ ಪಾಂಡುರಂಗ ನೇರಲಕಟ್ಟೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಿಎಸ್‌ಐ ನಾಗಪ್ಪ ಆರೋಪಿತರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.