ಶಿರಸಿ: ಕಳೆದ 7 ತಿಂಗಳುಗಳಿಂದ ಹೈನಯಗಾರರಿಗೆ ಬಾರದ ಹಾಲು ಪ್ರೋತ್ಸಾಹ ಧನ ಮಂಜೂರಿ ಮಾಡಿಸುವಂತೆ ಶಾಸಕ ಭೀಮಣ್ಣ ನಾಯ್ಕ ಅವರಲ್ಲಿ ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಒತ್ತಾಯಿಸಿ ಮನವಿ ನೀಡಿದ್ದಾರೆ.
ಕಳೆದ 2023ರ ಸೆಪ್ಟೆಂಬರ್ ದಿಂದ 2024 ರ ಎಪ್ರೀಲ್ ತನಕವೂ ಗೆ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಒಟ್ಟೂ 4,22,94,795 ರೂ. ನಷ್ಟು ಹಣ ಸರಕಾರದಿಂದ ಹಾಲಿನ ಪ್ರೋತ್ಸಾಹಧನ ಜಮಾ ಆಗಬೇಕಾಗಿತ್ತು. ಆದರೆ, ಸರಕಾರದಿಂದ ಹಾಲು ಉತ್ಪಾದಕ ರೈತರಿಗೆ ಬರಬೇಕಾದ ಹಾಲಿನ ಪ್ರೋತ್ಸಾಹಧನ ಇನ್ನೂ ಜಮಾ ಆಗಿಲ್ಲ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಬರಗಾಲದಿಂದ ಜಿಲ್ಲೆಯ ಹೈನೋದ್ಯಮ ಪಶು ಆಹಾರದ ದರ ದುಬಾರಿ, ಕೊರತೆಗಳಿಂದ ಈಗಾಗಲೇ ಕಷ್ಟದಲ್ಲಿ ಇದ್ದಾರೆ. ಈ ಪ್ರೋತ್ಸಾಹಧನ ಅನುಕೂಲ ಆಗುತ್ತಿತ್ತು. ತಕ್ಷಣ ಹಣ ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು.
ಈ ವೇಳೆಮಂಜುಗುಣಿ ಹಾಲು ಸಂಘದ ಅಧ್ಯಕ್ಷ ಪ್ರವೀಣ ತೆಪ್ಪಾರ ಇತರರು ಇದ್ದರು.