Slide
Slide
Slide
previous arrow
next arrow

ಲಂಡನ್‌ನಲ್ಲಿ ಬಸವೇಶ್ವರರ ಪ್ರತಿಮೆಗೆ ನಮನ ಸಲ್ಲಿಸಿದ ಶಾಸಕ ಆರ್.ವಿ.ಡಿ.

300x250 AD

ಜೋಯಿಡಾ: ಲಂಡನ್‌ನ ಥೇಮ್ಸ್ ನದಿ ತೀರದಲ್ಲಿರುವ ಬಸವೇಶ್ವರ ಪ್ರತಿಮೆಗೆ ಜೋಯಿಡಾ -ಹಳಿಯಾಳ ಶಾಸಕ ಹಾಗೂ ಕರ್ನಾಟಕ ರಾಜ್ಯದ ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ನಮನ ಸಲ್ಲಿಸಿದರು.

   ಖಾಸಗಿ ಕಾರ್ಯಕ್ರಮದ ನಿಮಿತ್ತ ಲಂಡನ್ ಪ್ರವಾಸದಲ್ಲಿರುವ ಅವರು ಬ್ರಿಟಿಷ್ ಸಂಸತ್ ಭವನದ ಎದುರು ಪ್ರತಿಷ್ಠಾಪಿಸಿರುವ ಸಮಾಜ ಸುಧಾರಕ ಜಗಜ್ಯೋತಿ ಶ್ರೀ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿದರು.ಈ ಐತಿಹಾಸಿಕ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಪ್ರವರ್ತಕನ ಪ್ರತಿಮೆಯನ್ನು ನೋಡುವುದು ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆ ಹಾಗೂ ಗೌರವದ ಸಂಗತಿಯಾಗಿದೆ.ಈ ಸಂದರ್ಭದಲ್ಲಿ ಕಲಬುರ್ಗಿ ಮೂಲದ ಕನ್ನಡಿಗ ಲಂಡನ್ ನ ಲ್ಯಾಂಬೇತ್ ನಗರದ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಅವರಿಂದ ಗೌರವ ಸ್ಮರಣಿಕೆಯನ್ನು ಸ್ವೀಕರಿಸಿ ಬಸವಣ್ಣನವರ ಮೂರ್ತಿ ಸ್ಥಾಪನೆ ಮಾಡಿದ ಲ್ಯಾಂಬೇತ್ ಬಸವೇಶ್ವರ ಪ್ರತಿಷ್ಠಾನಕ್ಕೆ ಕೃತಜ್ಞತೆ ಸಲ್ಲಿಸಿದರು.

300x250 AD
Share This
300x250 AD
300x250 AD
300x250 AD
Back to top