ಜೋಯಿಡಾ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಗುಡುಗು ಮಿಶ್ರಿತ ಮಳೆ ಬೀಳುತ್ತಿತ್ತು. ಆದರೆ ಗುರುವಾರ ಬಿದ್ದ ಭಾರಿ ಬಿರುಗಾಳಿ ಮಳೆಗೆ ವಿದ್ಯುತ್ ದೂರವಾಣಿ ತಂತಿಗಳು ನೆಲಕಚ್ಚಿ ಬಿದ್ದರೆ, ಹಲವಾರು ರೈತರ ಅಡಿಕೆ ತೆಂಗಿನ ಮರಗಳು ಬಿದ್ದು ರೈತರು ಕಂಗಲಾಗುವಂತ ಸ್ಥಿತಿ ನಿರ್ಮಾಣವಾಗಿದೆ.
ಶೇವಾಳಿ ಗ್ರಾಮ ಒಂದರಲ್ಲೇ 35ಕ್ಕೂ ಹೆಚ್ಚು ಅಡಿಕೆ ಮರಗಳು 4 ತೆಂಗಿನ ಮರಗಳು ಬಿದ್ದು ರೈತರು ಬೆವರುವಂತೆ ಮಾಡಿದೆ. ನೀರಿರುವ ತೋಟವನ್ನು ಹೇಗೋ ಕಾಯ್ದುಕೊಂಡು ಬಂದ ಕೃಷಿಕರಿಗೆ ಈ ಬಿರುಗಾಳಿಯಿಂದ ಆದ ಹಾನಿ ನಿದ್ದೆ ಗೆಡುವಂತೆ ಮಾಡಿದೆ. ವಸಂತ್ ದೇಸಾಯಿ, ರವಿ ದೇಸಾಯಿ, ಸುಧಾಕರ್ ತಿಮ್ಮಪ್ಪ ಸೇರಿದಂತೆ 10 ಕ್ಕೂ ಹೆಚ್ಚು ರೈತರ ಅಡಿಕೆ ಮರಗಳು ಬಿದ್ದು ಪಸಲು ನಾಶವಾಗಿದೆ. ಶ್ರೀನಿವಾಸ್ ಭಟ್ ಮನೆ ಪಕ್ಕದಲ್ಲಿ ತೆಂಗಿನ ಮರ ಅಡಿಕೆ ಮರ ಬಿರುಗಾಳಿಗೆ ಬಿದ್ದ ಪರಿಣಾಮ ಸ್ವಲ್ಪದರಲ್ಲೇ ಮನೆ ಉಳಿದಿದೆ. ಒಟ್ಟಾರೆ ಮಳೆಯಿಂದ ಆಗಿರುವ ಹಾನಿ ಇನ್ನೂ ತಿಳಿದು ಬರಬೇಕಾಗಿದೆ.