ಹೊನ್ನಾವರ: ವಿದ್ಯಾ ವಾಹಿನಿ ಪೋರ್ಟಲ್ ಮೂಲಕ ಸರ್ಕಾರವು ನಡೆಸುವ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಆಯ್ಕೆಯಾದ ದೀಕ್ಷಾ ಎಂ. ಹೆಗಡೆ ಜಿಲ್ಲಾ ಮಟ್ಟದ ರಸಪ್ರಶ್ನೆಯಲ್ಲಿ ವಿಜೇತಳಾಗುವ ಮೂಲಕ ವಿಭಾಗಿಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿದ್ಯಾ ವಾಹಿನಿ ಪೋರ್ಟಲ್ ನಲ್ಲಿ ಆನ್ಲೈನ್ನಲ್ಲಿ ನಡೆಸಲಾಗಿದ್ದ ತಾಲೂಕು ಮಟ್ಟದ ರಸಪ್ರಶ್ನೆಯಲ್ಲಿ ವಿಜೇತಳಾಗಿದ್ದ ಅಳ್ಳಂಕಿ ಪ್ರೌಢಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ, ಕುಮಟಾ ಡಯಟ್ ಅಲ್ಲಿ ನಡೆದ ಜಿಲ್ಲಾಮಟ್ಟದ ರಸಪ್ರಶ್ನೆಯಲ್ಲಿ ವಿಜೇತಳಾಗಿ ಬೆಳಗಾವಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ರಸಪ್ರಶ್ನೆಯಲ್ಲಿ ಸರ್ಕಾರವು ತಾಲೂಕು ಮಟ್ಟದ ವಿಜೇತರಿಗೆ 3000 ರೂ. ಜಿಲ್ಲಾ ಮಟ್ಟದ ವಿಜೇತರಿಗೆ 5000 ರೂ. ಹಾಗೂ ವಿಭಾಗಿಯ ಮಟ್ಟದ ವಿಜೇತರಿಗೆ 10,000 ರೂ. ಹಾಗೂ ರಾಜ್ಯಮಟ್ಟದ ವಿಜೇತರಿಗೆ 20000 ರೂ. ನಗದು ಮೊತ್ತವನ್ನು ಬಹುಮಾನವಾಗಿ ಘೋಷಿಸಿದ್ದು , ವಿದ್ಯಾರ್ಥಿಯ ಈ ಸಾಧನೆಗೆ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಮುಖ್ಯ ಶಿಕ್ಷಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.