Slide
Slide
Slide
previous arrow
next arrow

ಮಾವ, ಅಳಿಯ, ಅಕ್ಕನ ಮಗಳಷ್ಟೇ ಈಡಿಗ ಸಮಾಜವಲ್ಲ; ರವೀಂದ್ರ ನಾಯ್ಕ

300x250 AD

ಸಿದ್ದಾಪುರ: ಈಡಿಗ(ನಾಮಧಾರಿ) ಸಮಾಜವು ಮಾವ, ಅಳಿಯ ಮತ್ತು ಅಕ್ಕಳ ಮಗಳಿಗೆ ಸೀಮಿತವಲ್ಲ. ವೈಯಕ್ತಿಕ ಹಿತಾಸಕ್ತಿಯಲ್ಲಿ ಸಮಾಜದ ಲಾಭವನ್ನು ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಸಾಮಾಜಿಕ ಚಿಂತಕ ಹಾಗೂ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಹೇಳಿದರು.

ಅವರು ಗುರುವಾರ ಸಿದ್ದಾಪುರ ತಾಲೂಕಿನ ಮನಮನೆ ಗ್ರಾಮದ ಈಶ್ವರಿ ದೇವಾಲಯ ವಾರ್ಷಿಕೋತ್ಸವ ಮತ್ತು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ರಾಮ ಕ್ಷೇತ್ರ ಮಹಾಸಂಸ್ಥಾನದ ಗುರುವಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಸಮಾಜದ ಧುರೀಣರು, ಸಮಾಜದಲ್ಲಿನ ಹಿಂದುಳಿದ ಜನರಿಗೆ ಗುರುತಿಸಿ ಅಂತವರ ಅಭಿವೃದ್ಧಿಗೆ ಕಾರ್ಯಪ್ರವರ್ತರಾಗಬೇಕು. ಈಡಿಗ (ನಾಮಧಾರಿ) ಸಮಾಜದ ಲಾಭವನ್ನು ಇತ್ತಿಚಿನ ದಿನಗಳಲ್ಲಿ ಒಂದು ಕುಟುಂಬ ವರ್ಗಕ್ಕೆ ಸೀಮಿತವಾಗುತ್ತಿರುವುದು ಖೇದಕರ ಎಂದು ಅವರು ವಿಷಾದಿಸಿದರು. ಇಂತಹ ಬೆಳವಣಿಗೆಯಿಂದ ಸಮಾಜದ ಬೆಳವಣಿಗೆ ಕುಂಟಿತವಾಗುವುದಲ್ಲದೇ, ಸಮಾಜದ ಒಗ್ಗಟ್ಟಿನ ಅಭಿವೃದ್ಧಿಗೆ ಮಾರಕವಾಗುವುದೆಂದು ವಿಶ್ಲೇಷಿಸಿದರು.

300x250 AD

ಈ ಸಂದರ್ಭದಲ್ಲಿ ಹಿರಿಯ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೇಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ವಿ ಎನ್ ನಾಯ್ಕ ಬೇಡ್ಕಣಿ, ಈಶ್ವರ ನಾಯ್ಕ ಮನಮನೆ, ವಿನಾಯಕ ನಾಯ್ಕ, ಹೊನ್ನಪ್ಪ ರಾಮ ನಾಯ್ಕ, ಸಿ ಆರ್ ನಾಯ್ಕ, ವಿರಭದ್ರ ಮಾಲ್ಯಾ ನಾಯ್ಕ, ಶಾಂತಾರಾಮ ನಾಯ್ಕ, ಜಿಲ್ಲಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ಸಾಮಾಜಿಕ ಚಿಂತಕ ಲೋಹಿತ್ ನಾಯ್ಕ ಕಾನಸೂರ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top