Slide
Slide
Slide
previous arrow
next arrow

ಮಂಗಳಾದೇವಿ ದೇವಸ್ಥಾನದ ವಾರ್ಷಿಕೋತ್ಸವ ಸಂಪನ್ನ

300x250 AD

ದಾಂಡೇಲಿ : ನಗರದ ಹಳೆ ದಾಂಡೇಲಿಯ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಸಂಭ್ರಮ ಸಡಗರದಿಂದ ವಾರ್ಷಿಕೋತ್ಸವ ಕಾರ್ಯಕ್ರಮವು ಸಂಪನ್ನಗೊಂಡಿತು.

ವಾರ್ಷಿಕೋತ್ಸವದ ನಿಮಿತ್ತ ಶ್ರೀ ಮಂಗಳಾದೇವಿ ಹಾಗೂ ಪರಿವಾರ ದೇವರುಗಳಿಗೆ 101 ಎಳನೀರಿನ ಅಭಿಷೇಕ, ಅರಶಿನ ಕುಂಕುಮ ಅಭಿಷೇಕ ಗಂಧದ ಅಭಿಷೇಕ, ನಂತರ ಕ್ಷೀರಭಿಷೇಕ, ಪಂಚಾಮೃತ ಅಭಿಷೇಕ ನಡೆದು ಅಮ್ಮನವರಿಗೆ ವಿಶೇಷವಾಗಿ ಕನ್ನಡಿ ಅಲಂಕಾರ ಪೂಜಾ ಕಾರ್ಯಕ್ರಮವು ಜರುಗಿತು.

ಮುತ್ತೈದೆಯರಿಂದ ಅರ್ಚಕರ ಮೂಲಕ ಅಮ್ಮನವರ ಹಾಗೂ ಪರಿವಾರ ದೇವರು ಸೇರಿಸಿ ಸಹಸ್ರ ನಾಮಾವಳಿ ಸಹಿತ ಅರಿಶಿಣ ಕುಂಕುಮ ಪುಷ್ಪಾರ್ಚನೆ ಕಾರ್ಯಕ್ರಮ ಜರುಗಿತು. ಇದೇ ಸಂದರ್ಭದಲ್ಲಿ ಸಾಮೂಹಿಕವಾಗಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

300x250 AD

ಕಾರ್ಯಕ್ರಮದ ಯಶಸ್ಸಿಗೆ ಶ್ರೀ.ಮಂಗಳಾದೇವಿ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಭಕ್ತಾಭಿಮಾನಿಗಳು ಶ್ರಮಿಸಿದ್ದರು.

Share This
300x250 AD
300x250 AD
300x250 AD
Back to top