ಕುಮಟಾ: ಯುವಾ ಬ್ರಿಗೇಡ್ ಕುಮಟಾ ವತಿಯಿಂದ ತಾಲೂಕಿನ ಮೂರೂರು ಗುಡ್ಡದ ಮೇಲೆ ಎಸೆದಿರುವ ಕಸದ ರಾಶಿಗಳನ್ನು ಮೂರನೇ ಹಂತದಲ್ಲಿ ಸ್ವಚ್ಚಮಾಡಲಾಯಿತು.
ಅಕ್ಷರಸ್ಥರೆನಿಸಿಕೊಂಡಿರುವ ಹಲವರಿಂದ ಈ ತರ ಕೆಲಸಗಳು ಆಗುತ್ತಿರುವದು ಅಸಹ್ಯಕರವಾದ ವಿಚಾರವಾಗಿದೆ. ಟ್ಯಾಬ್ಲೇಟ್, ಚಪ್ಪಲ್, ಬಟ್ಟೆ, ವಾಹನಗಳ ಬಿಡಿ ಭಾಗ, ಮಧ್ಯದ ಬಾಟಲ್ ಹಾಗೂ ಪ್ಯಾಕೇಟ್, ಪ್ಲಾಸ್ಟಿಕ್, ಎಲ್ಲಾ ತರದ ಕಸದ ರಾಶಿಗಳು ಇದ್ದು ಸಾಧ್ಯವಾದಷ್ಟು ಮಟ್ಟಿಗೆ ಸ್ವಚ್ಚ ಮಾಡಲಾಗಿದೆ. ಇನ್ನೆನ್ನಿದ್ದರು ಆ ಜಾಗದಲಿ ಕಸಬಿಳದಂತೆ ಸರ್ಕಾರ ಹಾಗೂ ಅಧಿಕಾರಿವರ್ಗ ಎಚ್ಚರ ವಹಿಸಬೇಕಾಗಿದೆ.
ಹಿಂದಿನ ವಾರ ಒಟ್ಟುಮಾಡಿದ ಕಸದ ರಾಶಿಯ ಸ್ವಲ್ಪಮಾತ್ರ ಪುರಸಭೆ ಕುಮಟಾದವರು ಸಂಗ್ರಹಿಸಿದ್ದು ಸ್ವಲ್ಪಅಲ್ಲೆ ಇಟ್ಟಿದ್ದು, ಕರೆ ಮಾಡಿ ಮಾತಾಡಿದಾಗ ಇನ್ನೆರಡು ದಿನದಲ್ಲಿ ಅಲ್ಲಿ ಸಂಗ್ರಹಿಸಿದ ಕಸವನ್ನು ವಿಲೇವಾರಿ ಮಾಡುವದಾಗಿ ಪುರಸಭಾ ಮುಖ್ಯಾಧಿಕಾರಿಗಳು ಹೇಳಿದ್ದಾರೆ. ಇನ್ನೆರಡು ದಿನದಲ್ಲಿ ವಿಲೇವಾರಿ ಮಾಡದಿದ್ದರೆ ಅಲ್ಲಿರುವ ಕಸಕ್ಕೆ ಬೆಂಕಿಹಾಕಲು ತೀರ್ಮಾನಿಸಲಾಗಿದೆ ಎಂದು ಯುವಾ ಬ್ರಿಗೇಡ್ ತಿಳಿಸಿದೆ. ಸ್ವಚ್ಚತಾ ಕೆಲಸದಲ್ಲಿ ಭಾಗವಹಿಸಿದ ಡಾ.ಪ್ರಕಾಶ ಪಂಡಿತ, ಮುಂಚೆ ಈ ಪರಿಸರ ಸ್ವಚ್ಛಂದವಾಗಿದ್ದು ಇತ್ತಿಚ್ಚೆಗೆ ಕಸದ ರಾಶಿಗಳ ಆಗರವಾಗಿದೆ ಎಂದರು. ಅಲ್ಲದೆ ಯುವಾ ಬ್ರಿಗೇಡ್ ಕುಮಟಾ ತಂಡವು ಮೂರುವಾರಗಳಿಂದ ಸ್ವಚ್ಚತೆಯನ್ನು ಮಾಡುತ್ತಿದ್ದು ಕೆಲಸವನ್ನು ಶ್ಲಾಘಿಸಿದರು.
ಯುವಾ ಬ್ರಿಗೇಡ್ ಸದಸ್ಯರಾದ ಗೌರೀಶ ನಾಯ್ಕ ಮಾತನಾಡಿ ಈ ತರ ಕಸದ ರಾಶಿಗಳಿಂದ ಪರಿಸರ ಮಾಲಿನ್ಯವಷ್ಟೇ ಅಲ್ಲದೆ ಚಿಕ್ಕ ಚಿಕ್ಕ ಮಕ್ಕಳ ಮೇಲು ಕೆಟ್ಟಪರಿಣಾಮ ಬಿರುತ್ತದೆ, ಇದೆ ತರ ಆದರೆ ಮುಂದಿನ ಪೀಳಿಗೆಗೆ ನಾವು ಕಸದ ರಾಶಿಯನ್ನು ಇಟ್ಟು ಕಲುಷಿತ ಪರಿಸರವನ್ನು ಕೊಡಬೇಕಾಗುತ್ತದೆ ಎಂದರು. ಕೆಲಸ ಮಾಡುವ ಕೈಗಳನ್ನು ಸೋಲಿಸಬೇಡಿ ಎನ್ನುವದಷ್ಟೇ ಯುವಾ ಬ್ರಿಗೇಡ್ ತಂಡದ ವಿನಂತಿ ಎಂದು ಹೇಳಿದರು.
ಈ ಸಂದರ್ಭದಲ್ಲು ಯುವಾ ಬ್ರಿಗೇಡ್ ವಿಭಾಗ ಸಹಸಂಚಾಲಕರಾದ ಸತೀಶ ಪಟಗಾರ, ಸದಸ್ಯರಾದ ರವೀಶ ನಾಯ್ಕ, ಗಣಪತಿ ಪಟಗಾರ, ಪ್ರಕಾಶ ನಾಯ್ಕ, ಸಂದೀಪ ಮಡಿವಾಳ, ವಿನಾಯಕ ಗುನಗ, ಅನೀಶ ಪಂಡಿತ, ಚಿದಾನಂದ ಅಂಬಿಗ, ಅಣ್ಣಪ್ಪ ನಾಯ್ಕ ಹಾಜರಿದ್ದರು