ಭಟ್ಕಳ: ಬಿಜೆಪಿ ಭಟ್ಕಳ ಮಂಡಲದ ನೂತನ ಅಧ್ಯಕ್ಷರ ಮತ್ತು ಪ್ರಧಾನ ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭವು ಇಲ್ಲಿನ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ಸಭಾಭವನ ಆಸರಕೇರಿಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಎಸ್. ಹೆಗಡೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಲೋಕಸಭಾ ಕ್ಷೇತ್ರ ಸಂಚಾಲಕ ಗೋವಿಂದ ನಾಯ್ಕ ಮಾತನಾಡಿ ‘ ಸುಬ್ರಾಯ ದೇವಾಡಿಗ ಅವರು ಉತ್ತಮವಾಗಿ ಪಕ್ಷ ಸಂಘಟನೆ ಮಾಡಿದ್ದಾರೆ. ಎಲ್ಲಾ ಕಾರ್ಯಕರ್ತರನ್ನು ಜೊತೆಗೆ ಸೇರಿಸಿಕೊಂಡು ಕೆಲಸ ನಿರ್ವಹಿಸಿದ್ದಾರೆ. ಸಮರ್ಥವಾಗಿ ಕೆಲಸ ಮಾಡಿದ್ದು ಇದಕ್ಕಾಗಿ ಜಿಲ್ಲಾ ಮಂಡಲದಲ್ಲಿ ಸಂಚಾಲಕರಾಗಿ ಆಯ್ಕೆ ಮಾಡಿದ್ದಾರೆ.
ಮಂಡಲದ ಕಾರ್ಯದರ್ಶಿಗಳು ಅಧ್ಯಕ್ಷರಿಗೆ ಸಹಕರಿಸಿಕೊಂಡು ಹೋಗುವುದರ ಜೊತೆಗೆ ಅವರಿಗೂ ಸಹ ಮುಂದೆ ಉತ್ತಮ ಹುದ್ದೆ ಪಕ್ಷ ಲಭಿಸಲಿದೆ. ಸದ್ಯ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬೂತ್ ಮಟ್ಟದಿಂದ ಉತ್ತಮ ಮತದಾನದಲ್ಲಿ ಬಿಜೆಪಿಗೆ ಲಭಿಸುವ ಹಾಗೆ ಕೆಲಸ ನಿರ್ವಹಿಸಬೇಕೆಂದು ಹೇಳಿದರು.
ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ, 3-4 ವರ್ಷದ ಅವಧಿಯಲ್ಲಿ ಸುಬ್ರಾಯ ದೇವಾಡಿಗ ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಕೋವಿಡ ಸಮಯದಲ್ಲಿಯೂ ಸಹ ಜವಾಬ್ದಾರಿಯುತ ಕಾರ್ಯ ಮಾಡಿದ್ದಾರೆ. ನೆರೆ ಹಾವಳಿಯಲ್ಲಿಯೂ ಸಹ ಶಾಸಕನಾಗಿದ್ದ ವೇಳೆ ನನಗೆ ಸಾಥ್ ನೀಡಿದ್ದಾರೆ. ಅಧ್ಯಕ್ಷರಾಗಿ ಕೆಲಸ ಮಾಡದೇ ಒರ್ವ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. ನೂತನ ಅಧ್ಯಕ್ಷರಿಗೆ ಪದಗ್ರಹಣ ಮಾಡಿದ್ದು ಎಲ್ಲರನ್ನು ವಿಶ್ವಾಸ ತೆಗೆದುಕೊಂಡು ಹೋಗಬೇಕಾದ ಜವಾಬ್ದಾರಿ ಇದೆ. ಮುಂದಿನ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಅಭ್ಯರ್ಥಿ ಯಾರೇ ಇರಲಿ ಪಕ್ಷ ಸಂಘಟನೆಯ ಮಾಡಬೇಕಾಗಿದೆ. ಕಾರ್ಯಕರ್ತರಿಂದಲೇ ಪಕ್ಷ ಬಲವರ್ಧನೆ ಸಾಧ್ಯ ಹಾಗಾಗಿ ಪಕ್ಷದ ಎಲ್ಲಾ ಸಭೆಯ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಬಿಜೆಪಿ ಮಂಡಲದ ನಿಕಟಪೂರ್ವ ಅಧ್ಯಕ್ಷ ಸುಬ್ರಾಯ ದೇವಾಡಿಗ ಮಾತನಾಡಿದರು.ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ, ಪ್ರಸನ್ನ ಕೆರೆಕೈ, ಪ್ರಶಾಂತ ನಾಯ್ಕ, ಹೇಮಂತ ಗಾಂವ್ಕರ, ಎಮ್.ಜಿ.ಭಟ್, ಶ್ರೀಕಾಂತ ನಾಯ್ಕ, ರವಿ ನಾಯ್ಕ ಜಾಲಿ, ವಿಷ್ಣುಮೂರ್ತಿ ಹೆಗಡೆ, ಸುರೇಶ ನಾಯ್ಕ, ರಾಜೇಶ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ಮುಕುಂದ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.