ಸಿದ್ದಾಪುರ: ತಾಲೂಕಿನ ಹೊಟ್ಲಕೊಪ್ಪದ ಶ್ರೀ ನಾಗಚೌಡೇಶ್ವರಿ ದೇವಿ ಮತ್ತು ಶ್ರೀ ಬಿರ್ಲು ಹುಲಿದೇವರುಗಳ 13 ನೇ ವಾರ್ಷಿಕೋತ್ಸವದ ಪ್ರಯುಕ್ತ ಹೆಗ್ಗರಣಿಯ ಶ್ರೀ ವೀರಮಾರುತಿ ಕದಂಬೇಶ್ವರ ಯಕ್ಷಗಾನ ಮಂಡಳಿಯ ಕಲಾವಿದರಿಂದ ಪ್ರದರ್ಶನಗೊಂಡ ಯಕ್ಷಗಾನ ಆಖ್ಯಾನ, ‘ಕನಕಾಂಗಿ ಕಲ್ಯಾಣ’ ಕಲಾತ್ಮಕವಾಗಿ ಮೆರೆಯಿತು. ನಾಟ್ಯಾಚಾರ್ಯ ಶಂಕರಭಟ್ ಸಿದ್ದಾಪುರ (ಬಲರಾಮ), ದೀಪಕ್ ಕುಂಕಿಪಾಲ್ (ಸುಭದ್ರೆ), ಗಂಗಾಧರ ಹೆಗಡೆ ಕಟ್ಟಿನಹಕ್ಕಲು (ಅಭಿಮನ್ಯು), ಲಕ್ಷ್ಮಿನಾರಾಯಣ ಹೆಗಡೆ ಶಿರಗುಣಿ (ಘಟೋದ್ಗಜ), ವಿನಾಯಕ ಮಾವಿನಕಟ್ಟಾ (ಕೃಷ್ಣ), ನಾಗರಾಜ ಹೆಗಡೆ (ದೂತ), ಮಹೇಶ (ಕೌರವ), ಸಂದೇಶ (ಕನಕಾಂಗಿ), ಪ್ರಸನ್ನ (ಲಕ್ಷ್ಮಣ) ಇವರೆಲ್ಲಾ ಕಣ್ಮನ ಸೆಳೆಯುವ ಕಲಾ ಪ್ರೌಢಿಮೆಯಿಂದ ರಂಜಿಸಿದರು. ಬಾಲಗೋಪಾಲನಾಗಿ ಕು.ಪ್ರಸನ್ನ ಅಭಿನಯಿಸಿದ. ಹಿಮ್ಮೇಳದಲ್ಲಿ ಭಾಗವತರಾಗಿ ತಿಮ್ಮಣ್ಣ ಗಾಣಗದ್ದೆ, ಎಂ.ಪಿ.ಹೆಗಡೆ ಉಲ್ಲಾಳಗದ್ದೆ, ಮದ್ದಳೆ ವಾದಕರಾಗಿ ವಿಠಲ ಪೂಜಾರಿ, ಚೆಂಡೆವಾದಕರಾಗಿ ಗಂಗಾಧರ ಹೆಗಡೆ ಕಂಚಿಮನೆ ಉತ್ತಮ ಸಾಥ್ ನೀಡಿದರು. ಮೊದಲು ಏರ್ಪಟ್ಟ ವೇದಿಕೆ ಕಾರ್ಯಕ್ರಮದಲ್ಲಿ ಗಣ್ಯರಾದ ವೀರಭದ್ರ ಜಂಗಣ್ಣರವರ್, ಕಮಲಾಕರ ಅಜ್ಜಿಬಳ, ಈಶ್ವರ ಚನ್ನಯ್ಯ, ನರಸಿಂಹ ಚನ್ನಯ್ಯ, ರಘುಪತಿ ನಾಯ್ಕ ಉಪಸ್ಥಿತರಿದ್ದರು. ಭಾಸ್ಕರ ಹೊಟ್ಲಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ತೇಜು ಹೊಟ್ಲಕೊಪ್ಪ ವಂದಿಸಿದರು.