Slide
Slide
Slide
previous arrow
next arrow

ಕ್ಷೇತ್ರಭೇಟಿ ಕಾರ್ಯನಡೆಸಿ ಮೆಚ್ಚುಗೆ ಪಡೆದ ಸೆಂಟ್ರಲ್ ಸ್ಕೂಲ್

300x250 AD

ಹೊನ್ನಾವರ:  ನಾಲ್ಕು ಗೋಡೆಗಳ ಮಧ್ಯ ಕುಳಿತು ಶಿಕ್ಷಣವನ್ನು ಕಲಿಯುವುದು ಇದ್ದೆ ಇರುತ್ತದೆ. ಪಠ್ಯದಲ್ಲಿ ಬಂದಿರುವ ವಿಷಯವನ್ನು ಪ್ರಾಯೋಗಿಕವಾಗಿ ಮಾಡಿ ಅಥವಾ ಸ್ಥಳಕ್ಕೆ ಹೋಗಿ ಅಲ್ಲಿನ ಮಾಹಿತಿಯನ್ನು ಪಡೆಯುವುದು ಇಂದಿನ ಶಿಕ್ಷಣಕ್ಕೆ ಅಗತ್ಯವಾಗಿ ಬೇಕಿದೆ. ಹೊಸ ಶಿಕ್ಷಣ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳಿಗೆ ಹೊಸತನ್ನು ಕಲಿಸಬೇಕು ಎಂದಾದಲ್ಲಿ ಹೊಸತನಕ್ಕೆ ಶಾಲೆಗಳು ಒಗ್ಗಿಕೊಳ್ಳಲೇಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯ ಜೊತೆಗೆ ಸರ್ವತೋಮುಖ ಬೆಳವಣಿಗೆಗೂ ಪೂರಕವಾಗಿ ಕೆಲಸವನ್ನು ಮಾಡುವ ಎಂ.ಪಿ.ಇ ಸೊಸೈಟಿಯ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳ ಪರಿಚಯವನ್ನು ಮಾಡಿಸಿ , ಕ್ಷೇತ್ರ ಭೇಟಿ ಅನ್ನುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಶಾಲೆಯ ಎಂಟು ಹಾಗೂ ಒಂಭತ್ತನೆ ತರಗತಿ ವಿದ್ಯಾರ್ಥಿಗಳು ತಮ್ಮ ಪಠ್ಯಕ್ಕೆ ಅನುಗುಣವಾಗಿ ನೆರೆಯ ಕುಮಟಾ ತಾಲೂಕಿನಲ್ಲಿರುವ ವಿವಿಧ ಕೈಗಾರಿಕೆಗಳಿಗೆ ಭೇಟಿಯನ್ನು ನೀಡಿ, ಉಪಯುಕ್ತ ಮಾಹಿತಿಯನ್ನು ಸಂಗ್ರಹಿಸಿದರು. ತೆಂಗಿನ ನಾರಿನ ಫ್ಯಾಕ್ಟರಿ, ಪ್ಲಾಸ್ಟಿಕ್ ಫ್ಯಾಕ್ಟರಿ ,ಕೆಮಿಕಲ್ ಫ್ಯಾಕ್ಟರಿ, ಐಸ್ ಫ್ಯಾಕ್ಟರಿ ಮತ್ತು  ಹ್ಯಾಂಡ್ ಗ್ಲೌಸ್ ನಿರ್ಮಾಣ ಕೈಗಾರಿಕೆಗಳಿಗೆ ಭೇಟಿ ನೀಡಿ ಅಲ್ಲಿ ಉಪಯೋಗಿಸುವಂತಹ ಕಚ್ಚಾ ವಸ್ತುಗಳು ಹಾಗೂ ಕೈಗಾರಿಕಾ ಉತ್ಪಾದನೆಯ ಪ್ರವೃತ್ತಿಗಳನ್ನು,  ಯಂತ್ರಗಳ ಚಲನವಲನಗಳ ಬಗ್ಗೆ ಹಾಗೂ ತಯಾರಿಸಿರುವ ಸರಕುಗಳು ಯಾವ ಯಾವ ಉದ್ದೇಶಗಳಿಗೆ ಬಳಸಲಾಗುವುದು ಮತ್ತು ಯಾವ ಯಾವ ಪ್ರದೇಶಗಳಿಗೆ ರಫ್ತು  ಮಾಡಲಾಗುತ್ತದೆ.  ಆ ಕೈಗಾರಿಕೆಗಳು ಸಣ್ಣ ಕೈಗಾರಿಕೆಯ ಅಥವಾ ಬೃಹತ್ ಕೈಗಾರಿಕೆಯ ಎಂಬುದರ ಬಗ್ಗೆ ಮಾಹಿತಿ, ಮತ್ತು ಕೈಗಾರಿಕೆಗಳು ಸಾಮಾನ್ಯ ಜನರು ಇರುವಂತಹ ಸ್ಥಳದಿಂದ ತುಂಬಾ ಅಂತರವಾಗಿರಲು ಕಾರಣಗಳು ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಸವಿವರ ಪಡೆದುಕೊಂಡರು.
ಎಂ .ಪಿ .ಇ. ಸೊಸೈಟಿಯ ಆಡಳಿತ ಮಂಡಳಿಯ ಸಹಕಾರ ಹಾಗೂ ಶಾಲಾ ಪ್ರಾಚಾರ್ಯ ಶ್ರೀಮತಿ ಕಾಂತಿ ಭಟ್ ಇವರ ಪ್ರೋತ್ಸಾಹದೊಂದಿಗೆ ಸಮಾಜ ವಿಜ್ಞಾನದ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ನಾಯ್ಕ್ , ಶಿಕ್ಷಕ ಸುಜಯ್ ಭಟ್, ಶಿಕ್ಷಕಿ ಸುಪ್ರೀತಾ ನಾಯಕ್ ರವರ ನೇತೃತ್ವದಲ್ಲಿ ಮಕ್ಕಳು ಕೈಗಾರಿಕೆಗಳ ಉದ್ದೇಶ ಹಾಗೂ ಅದರ ಕಾರ್ಯ ವೈಖರಿಯನ್ನು ತಿಳಿದುಕೊಂಡರು. ವಿದ್ಯಾರ್ಥಿಗಳಿಗೆ ಇಂತಹ ಶಿಕ್ಷಣದ ಅಗತ್ಯತೆ ಹಾಗೂ ಸಮಾಜದ ಇತರೆ ಗಣ್ಯರ ಜೊತೆ ಮತ್ತು ಸಮಾಜದಲ್ಲಿ ಯಾವೆಲ್ಲ ರೀತಿಯಲ್ಲಿ ಜನರು ಬದುಕನ್ನ ಸಾಗಿಸುತ್ತಿರುತ್ತಾರೆ. ನಾವು ಮುಂದೆ ಸಮಾಜಮುಖಿಯಾಗಿ ಹೇಗೆಲ್ಲಾ ಬಾಳಬಹುದು ಎಂಬುದನ್ನು ಅರಿಯಲು ಇಂತಹ ಕ್ಷೇತ್ರ ಭೇಟಿಯಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಅತ್ಯುಪಯುಕ್ತವಾಗಿರುತ್ತದೆ ಎಂದು ಪಾಲಕರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top