Slide
Slide
Slide
previous arrow
next arrow

ಬಾಳಿಗಾ ಮಹಾವಿದ್ಯಾಲಯದಲ್ಲಿ ಉಪನ್ಯಾಸ ಕಾರ್ಯಕ್ರಮ ಯಶಸ್ವಿ

300x250 AD

ಕುಮಟಾ: ಇಲ್ಲಿನ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಜ್ಞಾನ ಸಂಘದ ಸಹಯೋಗದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಾಧನೆಗಳು ಮತ್ತು ಚಂದ್ರಯಾನ-3 ರ ಯಶಸ್ಸಿನ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಇಸ್ರೋ ಮತ್ತು ಐಸ್ಯಾಕ್‌ನ ನಿವೃತ್ತ ವಿಜ್ಞಾನಿಗಳಾದ ಪಿ.ಜೆ. ಭಟ್‌ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಉಗಮ, ಸಾಧನೆಗಳು, ಚಂದ್ರಯಾನದ ಸಫಲತೆ, ವಿಫಲತೆಯಿಂದ ಕಲಿತಂತಹ ಅಂಶಗಳು,  ಚಂದ್ರಯಾನ-1,2 ಮತ್ತು ಚಂದ್ರಯಾನ-3 ರ ಕುರಿತು ಪ್ರದರ್ಶನ ತಂತ್ರಾಂಶ ಮತ್ತು ದೃಶ್ಯಾವಳಿಗಳೊಂದಿಗೆ ವಿಶೇಷ ಉಪನ್ಯಾಸವನ್ನು ನೀಡಿದರು. ಇಸ್ರೋ ವಿಜ್ಞಾನಿಗಳ ವಿಶೇಷ ಕೊಡುಗೆಗಳನ್ನು ಕಾರ್ಯಕ್ರಮದಲ್ಲಿ ಸ್ಮರಿಸಿದರು. ವಿಶೇಷ ಉಪನ್ಯಾಸದ ನಂತರ ಶಿಕ್ಷಕ ವಿದ್ಯಾರ್ಥಿಗಳೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಪ್ರೀತಿ ಪಿ. ಭಂಡಾರಕರ ಶಿಕ್ಷಕರಾಗುವವರಿಗೆ ವಿಜ್ಞಾನಿಗಳ ವ್ಯಕ್ತಿತ್ವ, ಶ್ರಮ, ಸಾಧನೆಗಳು ಪ್ರೇರಣೆ ನೀಡುತ್ತದೆ. ಇಸ್ರೋ ವಿಜ್ಞಾನಿಗಳ ಕೊಡುಗೆ ಎಲ್ಲ ಕ್ಷೇತ್ರಗಳಲ್ಲಿದೆ. ವಿಜ್ಞಾನ ಕಾರ್ಯಕ್ರಮಗಳ ಮೂಲಕ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಜ್ಞಾನ ಸಂಘದ ಮಾರ್ಗದರ್ಶಕರಾದ ಸುಬ್ರಹ್ಮಣ್ಯ ಕೆ. ಭಟ್‌ ಸ್ವಾಗತಿಸಿ, ವಿಶೇಷ ಉಪನ್ಯಾಸಕರನ್ನು ಪರಿಚಯಿಸಿದರು. ಶಿಕ್ಷಕ ವಿದ್ಯಾರ್ಥಿನಿಯರಾದ ಉಷಾ ಮತ್ತು ಸಮೀಕ್ಷಾ ಜೋಷಿ ಪ್ರಾರ್ಥಿಸಿದರು. ವಿಜ್ಞಾನ ಸಂಘದ ಕಾರ್ಯದರ್ಶಿ ದಿವ್ಯಾ ಕೆ. ಭಟ್ ವಂದಿಸಿದರು. ವೇದಿಕೆಯಲ್ಲಿ ವಿದ್ಯಾರ್ಥಿಸಂಘದ ಕಾರ್ಯಾಧ್ಯಕ್ಷರಾದ  ಜಿ. ಡಿ. ಭಟ್ ಉಪಸ್ಥಿತರಿದ್ದರು. ಶಿಕ್ಷಕ ವಿದ್ಯಾರ್ಥಿನಿ ವಿ. ಅನ್ವಿತಾ ಕಾರ್ಯಕ್ರಮ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top