Slide
Slide
Slide
previous arrow
next arrow

ಅಂತರರಾಷ್ಟ್ರೀಯ ತರಬೇತಿಯಲ್ಲಿ ವಿಡಿಐಟಿ ಪ್ರಾಧ್ಯಾಪಕರ ಸಾಧನೆ

300x250 AD

ಹಳಿಯಾಳ: ಕೆ.ಎಲ್‌ಎಸ್‌ವಿಡಿಐಟಿ ಹಳಿಯಾಳದ ಮೆಕ್ಯಾನಿಕಲ್ ವಿಭಾಗದ 5 ಪ್ರಾಧ್ಯಾಪಕರು ಮಹಿಜೊ ಇಂಡಿಯಾ ಜಪಾನ್ ಅಧ್ಯಯನ ಕೇಂದ್ರದ ‘ವಿಜಿನರಿ ಲರ್ನಿಂಗ್ ಕಮ್ಯುನಿಟಿ ಆಫ್ ಇಂಡಿಯಾ’  ತರಬೇತಿಯಲ್ಲಿ ಉತ್ತಮ ಶ್ರೇಣಿ ಪಡೆದುಕೊಂಡಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು (ಐಐಎಂಬಿ) ಆಯೋಜಿಸಿದ್ದ ತರಬೇತಿಯಲ್ಲಿ  ಡಾ.ಕೆ.ಎಸ್.ಪೂಜಾರ್, ಡಾ.ಶಂಕರ್ ಬಡಿಗೇರ್, ಡಾ.ಗುರುರಾಜ್ ಹತ್ತಿ, ಪ್ರೊ.ಸಂತೋಷ್ ಸವಣೂರ್, ಪ್ರೊ.ಗುರುನಾಥ ಮೇವುಂಡಿ ಇವರುಗಳು ಪಾಲ್ಗೊಂಡು  ಮೊದಲನೇ ಆವೃತ್ತಿಯ  ತರಬೇತಿ ಪರೀಕ್ಷೆಯಲ್ಲಿ  70% ಅಧಿಕ ಅಂಕವನ್ನು  ಪಡೆದುಕೊಂಡಿದ್ದಾರೆ. ಕೈಗಾರಿಕಾ ಕೌಶಲ್ಯ, ಆಧುನಿಕ ಉತ್ಪಾದನಾ ವಿಧಾನಗಳು ನಾಯಕತ್ವ ಗುಣ ಸೇರಿದಂತೆ ಅನೇಕ ವಿಷಯಗಳ ಮೇಲೆ  8 ತಿಂಗಳ ತರಬೇತಿ ಪಡೆದುಕೊಂಡು,ಐಐಎಂ ಬೆಂಗಳೂರು ನಡೆಸಿದ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದುಕೊಂಡಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದ ತರಬೇತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವ ಮಹಾವಿದ್ಯಾಲಯದ ಪ್ರಾಧ್ಯಾಪಕರನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ವಿನಾಯಕ್ ಲೋಕುರ್ ಅಭಿನಂದಿಸಿದ್ದಾರೆ.

300x250 AD

ಐಐಎಂಬಿಯಲ್ಲಿ ನಡೆದ ಈ ತರಬೇತಿ ಪರೀಕ್ಷೆಯಲ್ಲಿ ಬೋಧಕ ಸಿಬ್ಬಂದಿಗಳು ಉತ್ತಮ ಅಂಕ ಪಡೆದಿರುವುದು ಹರ್ಷ ತಂದಿದ್ದು, ವಿದ್ಯಾರ್ಥಿಗಳಲ್ಲಿ ಮ್ಯಾನೇಜ್ಮೆಂಟ್ ಕೌಶಲ್ಯವನ್ನು ಹೆಚ್ಚಿಸಲು ಇದು ಸಹಕಾರಿಯಾಗುವುದೆಂದು ಪ್ರಾಚಾರ್ಯರಾದ ಡಾ.ವಿ.ಎ.ಕುಲಕರ್ಣಿ ಹೇಳಿದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ. ಮುರುಗಯ್ಯ ಎಸ್.ಬಿ , ಡೀನ್ ಪ್ರೊ.ಎಸ್.ಡಿ. ಕುಲಕರ್ಣಿ ಮತ್ತು ಮಹಾವಿದ್ಯಾಲಯದ ಸಿಬ್ಬಂದಿಗಳು ತರಬೇತಿ ಪರೀಕ್ಷೆಯಲ್ಲಿ  ಉತ್ತಮ ಸಾಧನೆಗೈದಿರುವ ಬೋಧಕ ಸಿಬ್ಬಂದಿಗಳಿಗೆ  ಅಭಿನಂದಿಸಿದ್ದಾರೆ.

Share This
300x250 AD
300x250 AD
300x250 AD
Back to top