ಕಾರವಾರ: ಇಲ್ಲಿನ ಹಿರಿಯ ಸಿವಿಲ್ ಹಾಗೂ ಸಿ.ಜೆ.ಎಂ ನ್ಯಾಯಾಲಯವು ಅಪ್ರಾಪ್ತ ಬಾಲಕನೋರ್ವ ಮೋಟಾರ ಸ್ಕೂಟರ್ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ವಾಹನದ ಆರ್.ಸಿ ಮಾಲೀಕಳಿಗೆ 30 ಸಾವಿರ ರೂ ದಂಡ ವಿಧಿಸಿದೆ. ನಗರದ ಸಂಚಾರ ಪೊಲೀಸ ಠಾಣಾ ವ್ಯಾಪ್ತಿಯ ಮುರಳೀಧರ ಮಠ ರಸ್ತೆಯಲ್ಲಿ ಕೆಲ ದಿನಗಳ ಹಿಂದೆ ರಸ್ತೆ ಅಪಘಾತ ನಡೆದಿತ್ತು. ಅಪಘಾತ ನಡೆದ ಸಂದರ್ಭದಲ್ಲಿ ಮೋಟಾರ ಸ್ಕೂಟರ ಸವಾರ ಇನ್ನೂ ಅಪ್ರಾಪ್ತನಾಗಿದ್ದ ಕಾರಣ ಪ್ರಕರಣವನ್ನು ಬಾಲ ನ್ಯಾಯಮಂಡಳಿಗೆ ವರ್ಗಾಯಿಸಲಾಗಿತ್ತು, ಬಾಲ ನ್ಯಾಯ ಮಂಡಳಿಯು ಅಪ್ರಾಪ್ತ ವಯಸ್ಸಿನ ಬಾಲಕನಿಗೆ 6,500 ರೂ. ದಂಡ ವಿಧಿಸಿದೆ.
ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಮೋಟಾರ ಸ್ಕೂಟರ ಚಲಾಯಿಸಲು ನೀಡಿದ ಕಾರಣ ವಾಹನದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಹಿರಿಯ ಸಿವಿಲ್ ಹಾಗೂ ಸಿ.ಜೆ.ಎಂ. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಮೋಟಾರ ಸ್ಕೂಟರಿನ ಮಾಲೀಕರಿಗೆ 30,000 ರೂಗಳನ್ನು ದಂಡ ವಿಧಿಸಿದೆ.
ಅಪ್ರಾಪ್ತ ಬಾಲಕನಿಂದ ವಾಹನ ಚಾಲನೆ: ದಂಡ ವಿಧಿಸಿದ ನ್ಯಾಯಾಲಯ
