ಶಿರಸಿ,: ಸಾಧಕ ರೈತರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುವ ವಿಜಯ ಕರ್ನಾಟಕ ಪತ್ರಿಕೆಯ ಕಾರ್ಯಕ್ರಮ ನಗರದ ಎಪಿಎಂಸಿ ಮಾರುಕಟ್ಟೆ ಆವರಣದ ಪೂಗ ಭವನದಲ್ಲಿ ಬುಧವಾರ ನಡೆಯಿತು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಿದ್ದಾಪುರ ಯಲ್ಲಾಪುರ ಮುಂಡಗೋಡ ಕುಮಟಾ ಮತ್ತು ಅಂಕೋಲಾದ ಆಯ್ದ 6 ಮಂದಿ ಕೃಷಿ ಸಾಧಕರಿಗೆ ಈ ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ ರೈತ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಾಸಕ ಶಿವರಾಮ ಹೆಬ್ಬಾರ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಎಷ್ಟೇ ಶ್ರೀಮಂತರಾದರು ಹಣ ತಿಂದು ಜೀವ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಬದುಕು ನಡೆಸುವುದಕ್ಕೆ ಕೃಷಿಕರ ಪರಿಶ್ರಮದ ದುಡಿಮೆ, ಆಹಾರ ಬೆಳೆಗಳ ಉತ್ಪಾದನೆ ಅನಿವಾರ್ಯವಾಗಿದೆ. ದೇಶದ ಜಿಡಿಪಿ ಬೆಳವಣಿಗೆಯಲ್ಲಿ ಕೂಡ ಕೃಷಿ ತೋಟಗಾರಿಕೆಯ ಆದಾಯದ ಪಾಲು ಮಹತ್ವದ್ದು ಆಗಿರುತ್ತದೆ. ಅದಕ್ಕಾಗಿ ರೈತರ ಸಂಕಷ್ಟಗಳಿಗೆ ಸರಕಾರಗಳು ಸ್ಪಂದಿಸುವ ಅಗತ್ಯವಿದೆ ಎಂದು ಶಿವರಾಮ ಹೆಬ್ಬಾರ ಹೇಳಿದರು..
ಧಾರವಾಡ ಹಾಲು ಒಕ್ಕೂಟದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ, ಉದ್ಯಮಿ ಉಪೇಂದ್ರ ಪೈ, ಉತ್ತರ ಕನ್ನಡ ಜಿಲ್ಲಾ ವಾಣಿಜ್ಯೋದ್ಯಮ ಕೃಷಿ ಸಂಸ್ಥೆ ಅಧ್ಯಕ್ಷ ಕೆ ಬಿ ಲೋಕೇಶ ಹೆಗಡೆ, ಶಿರಸಿ ಅಡಿಕೆ ಕಾಳು ಮೆಣಸು ಯಾಲಕ್ಕಿ ವರ್ಷಗಳ ಸಂಘದ ಅಧ್ಯಕ್ಷ ಸತೀಶ ಭಟ್ಟ ಮುಂತಾದವರು ಉಪಸ್ಥಿತರಿದ್ದರು.
ಶಿರಸಿಯ ರಾಮಚಂದ್ರ ಹೆಗಡೆ ಸಾಲ್ಕಣಿ, ಸಿದ್ದಾಪುರದ ಮಂಜುನಾಥ ಹೆಗಡೆ ಗೋರವಿಕೈ, ಯಲ್ಲಾಪುರದ ಎನ್ ಕೆ ಭಟ್ಟ ಆಗ್ಗಾಶಿಕುಂಬ್ರಿ, ಅಂಕೋಲಾದ ಕೀರಾ ಕೃಷ್ಣ ಹರಿಕಂತ್ರ, ಕುಮಟಾದ ಊರುಕೇರಿ ನಾರಾಯಣ ವೈದ್ಯ, ಮುಂಡಗೋಡದ ರಮೇಶ ಭಜಂತ್ರಿ ಅವರು ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.