ಅಂಕೋಲಾ: ಕೃಷಿ ಮತ್ತು ಪಶು ಸಂಗೋಪನೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸರ್ಕಾರ ಹಲವಾರು ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದು ಆ ಕುರಿತು ರೈತರಿಗೆ ಮಾಹಿತಿ ನೀಡುವ ಕೆಲಸ ಇಲಾಖೆಗಳ ಅಧಿಕಾರಿಗಳಿಂದ ನಡೆಯಬೇಕು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದು ಕೃಷಿ, ಪಶು ಸಂಗೋಪನೆ ಕ್ಷೇತ್ರದಲ್ಲಿ ರೈತರು ಪ್ರಗತಿ ಸಾಧಿಸಬೇಕು ಎಂದು ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಹೇಳಿದರು.
ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ತಾಲೂಕು ಪಂಚಾಯತ್ ಅಂಕೋಲಾ ಹಾಗೂ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಜಾನವಾರುಗಳ ಪ್ರದರ್ಶನ ಹಾಗೂ ಕಿಸಾನ್ ಗೋಷ್ಠಿ ಕಾರ್ಯಕ್ರಮವನ್ನು ಗೋವುಗಳನ್ನು ಪೂಜಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ರೈತರು ದೇಶದ ಜೀವಾಳವಾಗಿದ್ದು ಅವರು ಕೃಷಿ ಕಾರ್ಯಗಳಿಂದ ವಿಮುಖರಾಗಬಾರದು,ಪಶು ಸಂಗೋಪನೆಗೆ ಇರುವ ಅವಕಾಶಗಳ ಕುರಿತು ಮಾಹಿತಿ ಪಡೆದು ಕೃಷಿಯ ಜೊತೆಗೆ ಪಶುಪಾಲನೆ,ಹೈನುಗಾರಿಕೆಯಲ್ಲಿ ತೊಡಗಿ ಹೆಚ್ಚಿನ ಲಾಭಗಳಿಸಬೇಕು ಎಂದು ಕರೆ ನೀಡಿದರು.
ಪಶು ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ.ಎಂ.ಕೆ.ಮೋಹನಕುಮಾರ, ಜಿಲ್ಲಾ ಪಾಲಿಟೆಕ್ನಿಕ್ ಉಪನಿರ್ದೇಶಕ ಡಾ.ಉಮೇಶ ಕೊಂಡಿ, ಪ್ರಗತಿಪರ ರೈತ ದೇವರಾಯ ನಾಯಕ, ಪಶು ವೈದ್ಯಾಧಿಕಾರಿ ಡಾ.ಸುಬ್ರಾಯ ಭಟ್ಟ ಮೊದಲಾದವರು ಮಾತನಾಡಿದರು.
ಜಾನುವಾರುಗಳ ಪ್ರದರ್ಶನದಲ್ಲಿ ವಿವಿಧ ತಳಿಯ ಗೋವುಗಳು, ಎತ್ತು, ಎಮ್ಮೆ, ಕುರಿ, ಮೇಕೆ, ಕೋಳಿಗಳನ್ನು ಪ್ರದರ್ಶಿಸಲಾಯಿತು.
ಡಾ ಶ್ರೀನಿವಾಸ ಪಾಟೀಲ್, ಡಾ ಸುಬ್ರಾಯ ಭಟ್,ಎಂ ಎಂ ಹೆಗಡೆ,ಡಾ ನದಾಫ್,ಡಾ ಪ್ರಶಾಂತ್ ಕುಮಾರ, ಸೇರಿದಂತೆ ಇತರರು ಇದ್ದರು